ಗೋಣಿಕೊಪ್ಪ ವರದಿ, ಫೆ. 28: ಟೌನ್‍ಶಿಪ್ ಡಿಸೈನರ್ ಹಾಗೂ ವಾಸ್ತುಶಿಲ್ಪಿ ಡಾ. ಮುಕ್ಕಾಟೀರ ಅಮೃತ್ ಸಚಿನ್ ಅವರಿಗೆ ಚಂಡಿಗಡ್ ಎಸ್.ಡಿ. ಶರ್ಮ ಮತ್ತು ಅಸೋಸಿಯೇಟ್ಸ್ ವತಿಯಿಂದ ಎ3ಎಫ್ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಎ3ಫೌಂಡೇಷನ್ ಬೆಳವಣಿಗೆಗೆ ಸಮರ್ಥ ಮತ್ತು ನವೀನ ಮಾದರಿಯ ಆರ್ಕಿಟೆಕ್ ಉತ್ತೇಜನಕ್ಕಾಗಿ ಚಂಡಿಗಡ ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಡೆದ 2018-19 ನೇ ಸಾಲಿನ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಯಮತ್ತೂರು ನೆಹರು ಸ್ಕೂಲ್ ಆಫ್ ಆರ್ಕಿಟೆಕ್ಟರ್ ಸಂಸ್ಥೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಅಮೃತ್ ಸಚಿನ್, ದೇಶದ 300 ಕ್ಕೂ ಅಧಿಕ ಸ್ಪರ್ಧಿಗಳ ಎದುರು ಸ್ಪರ್ಧಿಸಿದ್ದರು. ಬೆಕ್ಕೆಸೊಡ್ಲೂರು ಮುಳ್ಳಂಗಡ ನಾಣಯ್ಯ, ಸೀಮಾ ದಂಪತಿ ಪುತ್ರಿಯಾಗಿರುವ ಇವರು, ಹರಿಹರ ಮುಕ್ಕಾಟಿರ ಸಚಿನ್ ಅವರ ಪತ್ನಿ.