ಸಿದ್ದಾಪುರ, ಫೆ. 28: ಚುನಾವಣಾ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಗಿಸುವ ವಾಹನಗಳಿಗೆ ಸೂಕ್ತ ಖರ್ಚು ವೆಚ್ಚ ಮತ್ತು ಚಾಲಕರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಬೇಕೆಂದು ಸಿದ್ದಾಪುರ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಮೋಣಪ್ಪ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ನೆಲ್ಲಿಹುದಿಕೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸಾಲಿನ ವಿಧಾನಸಭಾ ಚುನಾವಣೆಗೆ ಸಿದ್ದಾಪುರದಿಂದ 40ಕ್ಕೂ ಅಧಿಕ ಜೀಪುಗಳನ್ನು ಕಳುಹಿಸುತ್ತಿದ್ದು, ಕೆಲವು ವಾಹಗಳಿಗೆ ಬೇಕಾದ ಖರ್ಚಿನ ಹಣವನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿ ಚುನಾವಣೆ ಸಂದರ್ಭ ಕರ್ತವ್ಯಕ್ಕೆ ತೆರಳುವ ಚಾಲಕರಿಗೆ ಮತದಾನದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರೂ ಯಾವದೇ ಸ್ಪಂದನೆ ನೀಡುತ್ತಿಲ್ಲ. ಕನಿಷ್ಟ ಪಕ್ಷ ಅಂಚೆ ಮತದಾನ ಮಾಡುವ ಅವಕಾಶ ಕೂಡಾ ನೀಡುತ್ತಿಲ್ಲ. ಇದರಿಂದಾಗಿ ಮತದಾನದ ಪಟ್ಟಿಯಿಂದ ಹೆಸರು ಮಾಯವಾಗುವ ಆತಂಕ ಇದೆ ಎಂದರು. ಗೋಷ್ಠಿಯಲ್ಲಿ ಸಿ.ಸಿ. ಸಬಾಸ್ಟಿನ್, ಇ.ಎಸ್. ರಶೀದ್ ಮತ್ತು ಪಿ.ಬಿ. ಜೋಸೆಫ್ ಇದ್ದರು.