ಶ್ರೀಮಂಗಲ, ಫೆ. 28: ಟಿ. ಶೆಟ್ಟಿಗೇರಿಯ ತಾವಳಗೇರಿ, ಮೂಂದ್ ನಾಡ್ ಕೊಡವ ಸಮಾಜದ ನೂತನ ಕಚೇರಿಯನ್ನು ಸಮಾಜ ಸೇವಕಿ ಹಾಗೂ ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ ಉದ್ಘಾಟಿಸಿದರು.

ತಮ್ಮ ಪತಿ ಕೈಬಿಲೀರ ಬೋಪಯ್ಯ ಜ್ಞಾಪಕಾರ್ಥವಾಗಿ ಪಾರ್ವತಿ ಬೋಪಯ್ಯ ಅವರು ರೂ. 1.20 ಲಕ್ಷವನ್ನು ಉದಾರವಾಗಿ ಕೊಡವ ಸಮಾಜದ ಕಚೇರಿ ನಿರ್ಮಾಣ ಮತ್ತು ಪೀಠೋಪಕರಣ ಖರೀದಿಗೆ ನೀಡಿದ್ದರು.

ಈ ಸಂದರ್ಭ ಕೊಡವ ಸಮಾಜದ ಆದ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ (ಬೋಸ್), ಕಾರ್ಯದರ್ಶಿ ಮನ್ನೇರ ರಮೇಶ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.