ಕುಶಾಲನಗರ, ಫೆ. 28: ಕುಶಾಲನಗರ ರೋಟರಿ ಮತ್ತು ರೋಟರಿ ಬೆಂಗಳೂರು ಬಸವೇಶ್ವರನಗರ ಸಂಯುಕ್ತ ಆಶ್ರಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಶಿಬಿರದಲ್ಲಿ 49 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು.
ಬೆಂಗಳೂರಿನ ಪೂರ್ಣಸುಧಾ ಕ್ಯಾನ್ಸರ್ ಫೌಂಡೇಶನ್ ತಂತ್ರಜ್ಞರ ತಂಡ ತಪಾಸಣಾ ಕಾರ್ಯ ಕೈಗೊಂಡರು. ರೋಟರಿ ಅಧ್ಯಕ್ಷ ಜೇಕಬ್, ಕಾರ್ಯದರ್ಶಿ ಪ್ರೇಮ್ಚಂದ್ರನ್, ಹಿಂದಿನ ಸಾಲಿನ ಅಧ್ಯಕ್ಷ ಪ್ರಕಾಶ್, ಯೋಜನಾ ನಿರ್ದೇಶಕರುಗಳಾದ ಶೋಭಾ ಸತೀಶ್, ಸುನಿತಾ ಮಹೇಶ್, ಆರತಿ ಹೆಚ್ ಶೆಟ್ಟಿ ಮತ್ತಿತರರು ಇದ್ದರು.