ನಾಪೆÇೀಕ್ಲು, ಫೆ. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಬೇತು ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಸಮೀಪದ ಬೇತು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೊಡವ ಭಾಷಿಕ ನಮ್ಮೆ ಕಾರ್ಯಕ್ರಮದಲ್ಲಿ ನಾಪೆÇೀಕ್ಲು ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸುವದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷೀಭೂತರಾದರು.
ನಾಪೆÇೀಕ್ಲು ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ನಡೆದ ಉರುಟ್ಟಿಕೊಟ್ಟ್ ಆಟ್ ಎಲ್ಲಾ ಪ್ರೇಕ್ಷಕರ ಮನಸೆಳೆಯಿತು. ಅದರಂತೆ ಸೇಕ್ರೆಡ್ ಹಾಟ್ರ್ಸ್ ಶಾಲಾ ವಿದ್ಯಾರ್ಥಿಗಳಿಂದ ಬೊಳಕಾಟ್, ಉಮ್ಮತ್ತಾಟ್, ಎಕ್ಸೆಲ್ ಶಾಲಾ ವಿದ್ಯಾರ್ಥಿಗಳಿಂದ ಕೊಡವ ನೃತ್ಯ, ಬೇತು ಬಾಪೂಜಿ ಕಾಲೋನಿ ಸದಸ್ಯರಿಂದ ತಾಲಿ ಪಾಟ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಮೆರವಣಿಗೆಯಲ್ಲಿ ಸಾಗಿ ಬಂದ ಜನಾಂಗಬಾಂದವರು ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ ಮಾತನಾಡಿ ಕೊಡವ ಭಾಷೆಯಲ್ಲಿ ಏನಿದೆ? ಏನಿಲ್ಲ? ಎಂಬದನ್ನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಚರ್ಚಿಸಲು ಕಾರ್ಯಾಗಾರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.
ನಮ್ಮ ಹಿರಿಯರು ಸ್ಥಳ ದಾನ ನೀಡಿದ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮಗಳಲ್ಲಿಯೂ ಶಾಲೆಗಳು ಆರಂಭಗೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗಿದೆ. ಇಲ್ಲವಾದರೆ ಇಂದಿಗೂ ಕೂಡ ಕೊಡಗಿನ ಬಹುತೇಕ ಮಂದಿ ಅವಿದ್ಯಾವಂತರಾಗಿಯೇ ಉಳಿಯುತ್ತಿದ್ದರು ಎಂದರು.
ಕೊಡವ ಸಾಹಿತ್ಯ ಅಕಾಡೆಮಿಯಿಂದ ಮಂದ್ ಮಾನಿ ಸೇರಿದಂತೆ ವಿವಿಧ ನೂತನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರ ಹೆಗ್ಗಳಿಕೆ ಅಧ್ಯಕ್ಷರದ್ದಲ್ಲ ಇಡೀ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಸಂಬಂಧಿಸಿದ ಗ್ರಾಮಸ್ಥರದ್ದಾಗಿದೆ ಎಂದರು. ಅಕಾಡೆಮಿ ವತಿಯಿಂದ ಕೊಡಗಿನ 18 ಮೂಲ ನಿವಾಸಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲರಿಗೂ ಇದರಲ್ಲಿ ಪ್ರಾತಿನಿಧ್ಯ ನೀಡಲಾಗುವದು ಎಂದರು. ಮಳೆಗಾಲದಲ್ಲಿ ಸಂಬಂಧಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂಕಷ್ಟಕ್ಕೀಡಾದವರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಹಾಯ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಅಕಾಡೆಮಿ ಸದಸ್ಯ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ಮಾತನಾಡಿ ಸರಕಾರದ ನಿಯಮದಡಿಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಅದರಂತೆ ಶ್ರೀ ಮಕ್ಕಿ ಶಾಸ್ತಾವು ಯುವ ಸಂಘಕ್ಕೆ ಒಂದು ಸೆಟ್ ದುಡಿ ಹಾಗೂ ನಾಪೆÇೀಕ್ಲು ಕಾವೇರಿ ಕಲಾ ವೇದಿಕೆಗೆ ಒಂದು ಸೆಟ್ ಬೆತ್ತದ ಕೋಲು ಮತ್ತು ತಾಳವನ್ನು ನೀಡಲಾಗಿದೆ. ಸರಕಾರಿ ಸಂಸ್ಥೆಯ ವಸ್ತುಗಳು ಎಲ್ಲರಿಗೂ ಸೇರಿದಂತಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಳ್ಳೆಪಂಡ ನಂಜುಂಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಂಡೀರ ಪೂಣಚ್ಚ, ಚೋಕಿರ ಉತ್ತಯ್ಯ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಅಪ್ಪಟ್ಟಿರ ಟಾಟು ಮೊಣ್ಣಪ್ಪ, ಹಂಚೇಟಿರ ಮನು ಮುದ್ದಪ್ಪ, ಫ್ಯಾನ್ಸಿ ಮುತ್ತಣ್ಣ, ಬೀಕಚಂಡ ಬೆಳ್ಯಪ್ಪ, ಬೊಳ್ಳಜ್ಜಿರ ಅಯ್ಯಪ್ಪ, ಕುಡಿಯರ ಶಾರದಾ, ಹೆಚ್.ಎ.ಗಣಪತಿ ಇದ್ದರು.
ಚೋಕಿರ ಯಾನ ಸಜಿತ್ ಪ್ರಾರ್ಥನೆ, ಕೊಂಡಿರ ನಾಣಯ್ಯ ಸ್ವಾಗತ, ಬೊಳ್ಳೆಪಂಡ ಹರೀಶ್ ನಿರೂಪಿಸಿ, ವಂದಿಸಿದರು. ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. -ಪಿ.ವಿ.ಪ್ರಭಾಕರ್