ಮಡಿಕೇರಿ, ಫೆ. 26: ರೋಗಿ ಗಳ ಸೇವೆಯೇ ಮಹಾಸೇವೆ ಎಂದು ಅತಿ ಕಡಿಮೆ ಶುಲ್ಕ ಪಡೆದು ಚಿಕಿತ್ಸೆ ನೀಡುವ ಮೂಲಕ ಜನಪರ ಕಾಳಜಿ ಹೊಂದಿರುವ ಚೇರಂಬಾಣೆಯ ಡಾ. ಶಂಕರ ನಾರಾಯಣ ಉರಾಳ ಹಾಗೂ ಸ್ನೇಹಿತರು ಮಳೆಹಾನಿ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡಿದ್ದಾರೆ. ಮದೆನಾಡು ವ್ಯಾಪ್ತಿಯ ಸಂತ್ರಸ್ತ ಕುಟುಂಬಗಳಿಗೆ ಸುಮಾರು ರೂ. 58 ಸಾವಿರ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿ.ಪಂ. ಮಾಜಿ ಸದಸ್ಯೆ ಬಬ್ಬೀರ ಸರಸ್ವತಿ ಹಾಜರಿದ್ದರು.