ಮಡಿಕೇರಿ, ಫೆ. 26: ಮಡಿಕೇರಿ ನಗರಸಭಾ ಆಯುಕ್ತರು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿ ದ್ದಾರೆ ಎಂದು ಆರೋಪಿಸಿರುವ ನಗರಸಭಾ ಸದಸ್ಯರುಗಳಾದ ಜೆಡಿಎಸ್‍ನ ಕೆ.ಎಂ. ಗಣೇಶ್ ಹಾಗೂ ಲೀಲಾ ಶೇಷಮ್ಮ ಆಯುಕ್ತರ ವರ್ಗಾವಣೆಗೆ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾ. 23 ರಂದು ಸಂಜೆ 4 ಗಂಟೆಗೆ ನಗರಸಭಾ ಸದಸ್ಯರ ವಿಶೇಷ ಸಭೆಯನ್ನು ಆಯೋಜಿಸಿದ್ದ ಆಯುಕ್ತರು, ಎಲ್ಲಾ ಸದಸ್ಯರಿಗೆ ಸಭೆಗೆ ಆಹ್ವಾನಿಸಿ ಪತ್ರ ನೀಡಿದ್ದು, ತಮ್ಮಿಬ್ಬರಿಗೆ ಪತ್ರ ನೀಡದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ನಗರಸಭಾ ಸದಸ್ಯತ್ವ ಅನರ್ಹತೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಸಭೆಗೆ ಆಹ್ವಾನಿಸದೆ ಕಡೆಗಣಿಸಿ ದ್ದಾರೆ. ಈ ಬಗ್ಗೆ ಆಯುಕ್ತರನ್ನು ಪ್ರಶ್ನಿಸಿದ ನಂತರ ಸಭೆಯನ್ನು ದಿಢೀರ್ ಆಗಿ ರದ್ದುಪಡಿಸಿ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಟೀಕಿಸಿದರು.