ಮಡಿಕೇರಿ, ಫೆ. 25: ಕುಶಾಲನಗರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಪಿ.ಕೆ. ಮುರುಳಿಧರ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ವರ್ಗಾವಣೆಗೊಳಿಸಿದ್ದಾರೆ. ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ಅವರನ್ನು ನಿಯೋಜಿಸಲಾಗಿದೆ. ಪುತ್ತೂರಿನಲ್ಲಿ ಇದುವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ದಿನಕರ ಶೆಟ್ಟಿ ಅವರನ್ನು ಕುಶಾಲನಗರ ಉಪವಿಭಾಗದ ಡಿವೈಎಸ್ಪಿಯಾಗಿ ನೇಮಿಸಲಾಗಿದೆ.