ಮಡಿಕೇರಿ, ಫೆ. 24: ರೋಟರಿ ಜಿಲ್ಲೆ 3181 ನ ವತಿಯಿಂದ ಮೊದಲ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ 25 ಮನೆಗಳನ್ನು ಮಳೆ ಹಾನಿಯ ಅರ್ಹ ಸಂತ್ರಸ್ತ ಕುಟುಂಬಗಳಿಗೆ ಜೂನ್ ತಿಂಗಳಿನಲ್ಲಿ ಹಸ್ತಾಂತರಿಸ ಲಾಗುವದೆಂದು ಜಿಲ್ಲಾ ರೋಟರಿ ರಾಜ್ಯಪಾಲ ಪಿ. ರೋಹಿನಾಥ್ ಭರವಸೆ ನೀಡಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ಈಗಾಗಲೇ 25 ಮನೆಗಳ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಚಾಲನೆ ನೀಡಲಾಗಿದ್ದು, ಜೂನ್‍ನಲ್ಲಿ ಈ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ. ಮುಂದಿನ ಹಂತದಲ್ಲಿ 25 ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು. ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್ ಸೇರಿದಂತೆ ವಿವಿಧ ದಾನಿಗಳಿಂದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ಆರ್ಥಿಕ ನೆರವು ಲಭಿಸುತ್ತಿದ್ದು ಇವುಗಳನ್ನು ಕೊಡಗಿನ ಜಲಪ್ರಳಯ ಸಂತ್ರಸ್ತರಿಗೆ ಸಮರ್ಪಕ ರೀತಿಯಲ್ಲಿ ವಿನಿಯೋಗಿಸಲಾಗುತ್ತದೆ ಎಂದು ರೋಹಿನಾಥ್ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಮಾರಕ ಪೆÇೀಲಿಯೋ ನಿರ್ಮೂಲನೆಗಾಗಿ ಪಣ ತೊಟ್ಟಿರುವ ರೋಟರಿ ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ 30 ವರ್ಷಗಳಿಂದ 128 ದೇಶಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಇದೀಗ ಮಾರ್ಚ್ 10 ರಂದು ಮತ್ತೆ ಪೆÇೀಲಿಯೋ ನಿರ್ಮೂಲನಾ ದಿನದ ಅಂಗವಾಗಿ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್ ಮಾತನಾಡಿ, ಮಿಸ್ಟಿ ಹಿಲ್ಸ್ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಅಗತ್ಯಕ್ಕೆ ತಕ್ಕಂತೆ ನೆರವು ನೀಡುತ್ತಿದೆ. ಸಾವಿರಾರು ಮಂದಿ ಮಿಸ್ಟಿ ಹಿಲ್ಸ್‍ನಿಂದ ಪ್ರಯೋಜನ ಪಡೆದಿದ್ದಾರೆ ಎಂದರಲ್ಲದೇ, ಸುಂಟಿಕೊಪ್ಪದಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ಶಾಲಾ ಶೌಚಾಲಯ ನಿರ್ಮಾಣ ಕಾರ್ಯ ಶೀಘ್ರವೇ ಪ್ರಾರಂಭವಾಗಲಿದ್ದು, ಮೂರು ವೈದ್ಯಕೀಯ ಚಿಕಿತ್ಸಾ ಶಿಬಿರಗಳ ಆಯೋಜನೆಗೂ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ರೋಟರಿಯ ಆಶಾ ಸ್ಫೂರ್ತಿ ಯೋಜನೆ ಮೂಲಕ ನಾಲ್ಕು ಅಂಗನವಾಡಿಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದೂ ರವಿಶಂಕರ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ರೋಟರಿಯ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್, ಜೋನಲ್ ಲೆಫ್ಟಿನೆಂಟ್ ಚೀಯಣ್ಣ, ರೋಟರಿ ಜಿಲ್ಲಾ ಸದಸ್ಯತ್ವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಹಾಗೂ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಎಂ.ಯು. ಮಹೇಶ್ ಉಪಸ್ಥಿತರಿದ್ದರು.

ನೆರವು ನೈಜ ಫಲಾನುಭವಿಗಳಿಗೆ ದೊರಕಬೇಕು

ರೋಟರಿ ಸೇರಿದಂತೆ ಸಾಮಾಜಿಕ ಸೇವಾ ಸಂಘಟನೆಗಳ ನೆರವು ಸಮಾಜದ ನೈಜ ಫಲಾನುಭವಿಗಳಿಗೆ ದೊರಕುವ ನಿಟ್ಟಿನಲ್ಲಿ ಸಂಘಟನೆಗಳು ಗಮನ ಹರಿಸಬೇಕಾಗಿದೆ ಎಂದು ರೋಟರಿ ಜಿಲ್ಲೆ 3181 ರ ರಾಜ್ಯಪಾಲ ಪಿ. ರೋಹಿನಾಥ್ ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ. ರೋಹಿನಾಥ್, ಯಾವದೇ ವ್ಯಕ್ತಿ ಜೀವನದಲ್ಲಿ ಸಣ್ಣ ಪುಟ್ಟ ಲೋಪದೋಶಗಳನ್ನು ಹೊಂದದೆ ಸಾಧನೆಯ ಗುರಿ ತಲಪಲು ಅಸಾಧ್ಯ. ಆದರೆ ಯಾರೂ ಜೀವನದಲ್ಲಿ ಶಾಶ್ವತವಾಗಿ ಕಹಿ ನೆನಪಾಗಿ ಉಳಿಯು ವಂಥ ಗುರುತರ ತಪ್ಪು ಮಾಡಬಾರ ದೆಂದು ಕಿವಿಮಾತು ಹೇಳಿದರು.

ರೋಟರಿ ಜಿಲ್ಲೆಯ ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್ ಮಾತನಾಡಿ, ರೋಟರಿಯಿಂದ ಈಗಾಗಲೇ ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ನಿವi್ರ್ತಣ ಕಾರ್ಯ ಪ್ರಾರಂಭವಾಗಿದ್ದು, ಪತ್ರಕರ್ತರಿಗೆ 5 ಸೇರಿದಂತೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ 50 ಮನೆಗಳನ್ನು ವರ್ಷಾಂತ್ಯದಲ್ಲಿ ನಿರ್ಮಿಸಿಕೊಡಲಾಗುತ್ತದೆ. ಮೊದಲ ಹಂತದ 25 ಮನೆಗಳನ್ನು ಮಳೆ ಪ್ರಾರಂಭವಾಗುವ ಮುನ್ನವೇ ಫಲಾನುಭವಗಳಿಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಚೀಯಣ್ಣ ಮಾತನಾಡಿ, ರೋಟರಿ ಯಿಂದ ಅಂಗನವಾಡಿಗಳಿಗೆ ಕಾಯಕಲ್ಪ ನೀಡುವ ಯೋಜನೆ ಪ್ರಗತಿಯಲ್ಲಿದ್ದು, 10 ಅಂಗನವಾಡಿಗಳನ್ನಾದರೂ ಪ್ರತೀ ರೋಟರಿ ಕ್ಲಬ್‍ಗಳು ನಿರ್ವಹಣೆಗೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ಕಾರ್ಯದರ್ಶಿ ಯು.ಎಂ. ಮಹೇಶ್, ಮುಂದಿನ ಸಾಲಿನ ಅಧ್ಯಕ್ಷ ಎಂ.ಆರ್. ಜಗದೀಶ್ ಹಾಜರಿದ್ದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಿಸ್ಟಿ ಹಿಲ್ಸ್‍ನ ವಿದ್ಯಾರ್ಥಿ ಗಳಾದ ಎನ್.ಎನ್. ನಿರುತ್, ಆರ್ಯ ರಾಜೇಶ್, ಶಮಿಕ್ ರೈ, ಅಕ್ಷಯ್ ಜಗದೀಶ್, ವಿಜಯ್ ಜಗದೀಶ್, ಆದ್ಯು ಸುಲೋಚನ, ಯಶ್ ಕಾರ್ಯಪ್ಪ, ಎನ್.ಸಿ.ಸಿ.ಯಲ್ಲಿ ಸಾಧನೆ ಮಾಡಿದ ಎನ್.ಎನ್. ಪೊನ್ನಣ್ಣ, ಬಿ.ಎಸ್. ತೇಜಸ್, ದೇಬಿಯಾನ ಭೌಮಿಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದ ಹೆಬ್ಬಟ್ಟಗೇರಿಯ ಬಿ.ವೈ. ಪೂವಪ್ಪ, ಮುಕ್ಕೋಡ್ಲು ಗ್ರಾಮದ ಟಿ.ಕೆ. ಕುಶಾಲಪ್ಪ, ಮಕ್ಕಂದೂರಿನ ಸಿ.ಸಿ. ರತನ್, ನಿಡುವಟ್ಟು ಗ್ರಾಮದ ಎ.ಟಿ. ಮಾದಪ್ಪ, ಮಂಗಳಾದೇವಿ ನಗರದ ಹೆಚ್.ಆರ್. ಸುಂದರ್ ರಾಜ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು.

ಜಿ.ಎನ್. ಶ್ರೀಹರಿರಾವ್ ಪ್ರಾರ್ಥಿಸಿ, ಅನಿಲ್ ಎಚ್.ಟಿ., ಬಿ.ಕೆ. ರವೀಂದ್ರ ರೈ, ಕೆ.ಡಿ. ದಯಾನಂದ, ಡಾ. ಎನ್.ಎಸ್. ನವೀನ್, ಎ.ಕೆ. ವಿನೋದ್ ಕುಶಾಲಪ್ಪ ನಿರ್ವಹಿಸಿದರು. ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಡಾ. ರವಿ ಅಪ್ಪಾಜಿ, ವಲಯ ಕಾರ್ಯದರ್ಶಿ ಕ್ರೆಜ್ವಲ್ ಕೋಟ್ಸ್, ಜಿಲ್ಲೆಯ ವಿವಿಧೆಡೆಗಳ ರೋಟರಿ ಸದಸ್ಯರು ಪಾಲ್ಗೊಂಡಿದ್ದರು. ಪುಲ್ವಾಮದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರೋಟರಿ ಸದಸ್ಯರು ಮೌನಾಚರಣೆ ಮೂಲಕ ಸಂತಾಪ ಸೂಚಿಸಿದರು.