ಮಡಿಕೇರಿ, ಫೆ. 24: ನಗರ ಬಿಜೆಪಿ ವತಿಯಿಂದ ಕೇಂದ್ರ ಬಿಜೆಪಿಯ ಕರೆಯ ಮೇರೆಗೆ ಮಹಾ ಸಂಪರ್ಕ ದಿನವನ್ನು ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಮನವರಿಕೆ ಮಾಡುವದರ ಮೂಲಕ ಕೇಂದ್ರದ ಸಾಧನೆಗಳನ್ನು ವಿವರಿಸಿದರು.

ನಂತರ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಹಾರಿಸುವದರ ಮೂಲಕ ನಮ್ಮ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮಕೆ ಚಾಲನೆ ನೀಡಲಾಯಿತು. ಈ ಸಂದರ್ಭ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಮೇಶ್ ಸುಬ್ರಮಣಿ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮನು ಮಂಜುನಾಥ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಕಲಾವತಿ, ಸವಿತಾ, ಉಣ್ಣಿಕೃಷ್ಣ, ರಮೇಶ್, ಪಿ.ಡಿ. ಪೊನ್ನಪ, ನಯನ್, ರಾಕೇಶ್, ಶ್ರವಣ್, ದೀಷು, ಶ್ರವಣ್, ಮೋಹನ್ ಮೊನ್ನಪ ಹಾಜರಿದ್ದರು.