ಸೋಮವಾರಪೇಟೆ,ಫೆ.24 : ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ಮುಕ್ತ ಆಡಳಿತದಿಂದಾಗಿ ಭಾರತ ದೇಶ ಬಲಿಷ್ಠವಾಗುತ್ತಿದ್ದು, ದೇಶವನ್ನು ಮುನ್ನಡೆಸಲು ನರೇಂದ್ರ ಮೋದಿಯೇ ಸೂಕ್ತ ಎಂಬ ಅಭಿಪ್ರಾಯ ದೇಶವಾಸಿಗಳಲ್ಲಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಇಲ್ಲಿನ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಮಟ್ಟ ದಿನದಿಂದ ದಿನಕ್ಕೆ ವೃದ್ಧಿಗೊಳ್ಳುತ್ತಿದ್ದು, ವಿದೇಶಗಳಲ್ಲೂ ಸಹ ಭಾರತೀಯರಿಗೆ ಗೌರವ ಲಭಿಸುತ್ತಿದೆ. ಭಾರತ ಇಂದು ಜಗ್ತತಿನ ಇತರ ದೇಶಗಳೆದುರು ತಲೆ ಎತ್ತಿ ನಿಲ್ಲುತ್ತಿದೆ ಎಂದರು.

ಆಯುಷ್ಮಾನ್ ಭಾರತ್, ಜನೌಷಧ್, ಮುದ್ರಾ, ಮೇಕ್ ಇನ್ ಇಂಡಿಯಾ, ಕಿಸಾನ್ ಸಮ್ಮಾನ್, ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸೇರಿದಂತೆ ಇನ್ನಿತರ ಯೋಜನೆಗಳ ಮೂಲಕ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಮೋದಿ ಶ್ರಮಿಸುತ್ತಿದ್ದಾರೆ ಎಂದು ರಂಜನ್ ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಬಿಜೆಪಿ ನಗರಾಧ್ಯಕ್ಷ ಸೋಮೇಶ್,ಪ.ಪಂ. ಸದಸ್ಯರುಗಳಾದ ಮಹೇಶ್, ಚಂದ್ರು, ನಳಿನಿ ಗಣೇಶ್, ಮಾಜೀ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಯುವ ಮೋರ್ಚಾ ಅಧ್ಯಕ್ಷ ಸುನಿಲ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ತಾಲೂಕು ಕಾರ್ಯದರ್ಶಿ ಶರತ್‍ಚಂದ್ರ, ಪದಾಧಿಕಾರಿಗಳಾದ ಜಗನ್ನಾಥ್, ಪಿ.ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಡ್ಲಿಪೇಟೆ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಡಿ. ಭಗವಾನ್, ಕೆ.ಎಸ್. ನಾಗರಾಜು, ಬಿ.ಕೆ. ಯತೀಶ್, ಕೆಲಕೊಡ್ಲಿ ಕೃಷ್ಣಪ್ಪ, ಇಂದೋಜಿರಾವ್, ಶಿವಗಣೇಶ್, ಕೆಂಚೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು.