ಚೆಟ್ಟಳ್ಳಿ, ಫೆ. 24: ಸಮೀಪದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸ ಸುನ್ನಿ ಬಾಲ ಸಂಘ ಕಾಶ್ಮೀರದಲ್ಲಿ ಭಾರತದ ಸೈನಿಕರ ಮೇಲೆ ನಡೆದ ಪಾಕಿಸ್ತಾನದ ಭಯೋತ್ಪಾದಕರ ಧಾಳಿಯನ್ನು ಖಂಡಿಸಿದರು.
ಧಾಳಿಯಲ್ಲಿ ಹುತಾತ್ಮರಾದ ಭಾರತದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಧ್ಯಾಪಕರಾದ ಆದಂ ಸಹದಿ, ಸುಲೈಮಾನ್ ಸಹದಿ, ಮುಸ್ತಫಾ ಸಖಾಫಿ, ಆರಿಫ್ ಸಖಾಫಿ ಹಾಗೂ ವಿದ್ಯಾರ್ಥಿಗಳು ಇದ್ದರು.