ನಾಪೆÇೀಕ್ಲು, ಫೆ. 22: ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಅಂಗವಾಗಿ ಸಿಎನ್‍ಸಿ ವತಿಯಿಂದ ದೇವಾಟ್ ಪರಂಬುವಿನಲ್ಲಿ ಬಲಿಯಾದ ಕೊಡವರಿಗೆ ಪುಷ್ಪಾರ್ಚನೆ ಗೌರವಾಂಜಲಿ ಅರ್ಪಿಸಲಾಯಿತು.

ನಂತರ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಸುಖ, ದುಃಖ, ಯಾತನೆ, ಸಂತೋಷಗಳನ್ನು ಹೃದಯಾಂತರಾಳದಿಂದ ವ್ಯಕ್ತಪಡಿಸುವದು ಅವರವರ ಮಾತೃಭಾಷೆಯಿಂದ ಮಾತ್ರ ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಚಂಬಂಡ ಜನತ್, ಮೊಣ್ಣಂಡ ಕಾರ್ಯಪ್ಪ ಇದ್ದರು.