ಮಡಿಕೇರಿ, ಫೆ. 22: ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್ ಅವರು ಮಡಿಕೇರಿ ನಗರ ವ್ಯಾಪ್ತಿಯ ಪ್ರವಾಸಿ ತಾಣಗಳಾದ ರಾಜಾಸೀಟ್, ನೆಹರು ಮಂಟಪ, ಕೊಡವ ಹೆರಿಟೇಜ್ ಹಾಗೂ ಅಬ್ಬಿ ಜಲಪಾತಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಇದರೊಂದಿಗೆ ಮಡಿಕೇರಿ ನಗರದ ನೂತನ ಮಾರುಕಟ್ಟೆ ಪ್ರಾಂಗಣದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು.