ಮಡಿಕೇರಿ, ಫೆ. 23: ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮ 2008 ರ ಅನ್ವಯ ಆನೆಕಾವಾಡಿಗ ಹುದ್ದೆಗೆ ನೇರ ನೇಮಕಾತಿಗಾಗಿ ಮೀಸಲಾತಿ ವರ್ಗೀಕರಣದಡಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಇವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಅದರಂತೆ ಫೆಬ್ರವರಿ 4, 2019 ರಂದು ಅಭ್ಯರ್ಥಿಗಳಿಗೆ ದೈಹಿಕ ತಾಳ್ವಿಕೆ/ ಆನೆ ನಿರ್ವಹಣಾ ಸಾಮಥ್ರ್ಯ/ಕನ್ನಡ ಭಾಷಾ ತಿಳುವಳಿಕೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಒಟ್ಟು 37 ಅಭ್ಯರ್ಥಿಗಳು ಹಾಜರಾಗಿದ್ದು, ಇದರಲ್ಲಿ ದೈಹಿಕ ಸಾಮಥ್ರ್ಯ, ಆನೆ ನಿರ್ವಹಣಾ ಸಾಮಥ್ರ್ಯ ಪರಿಶೀಲನೆ ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಅನುಗುಣವಾಗಿ ಕರ್ನಾಟಕ ರಾಜ್ಯ ವ್ಯಾಪ್ತಿಯ ಅಧಿಸೂಚಿತ ಅರಣ್ಯದೊಳಗೆ ವಾಸವಾಗಿರುವ ಬಗ್ಗೆ ಮತ್ತು ಆನೆ ನಿರ್ವಹಣಾ ನಿರ್ವಹಣೆಯ ಅನುಭವದ ಬಗ್ಗೆ ಅಯ್ಕೆ ಸಮಿತಿಯು ನೀಡಿದ ಗರಿಷ್ಠ ಅಂಕಗಳ ಅನುಸಾರ ಮತ್ತು ಕರ್ನಾಟಕ ನಾಗರಿಕ ಸೇವಾ ಸಾಮಾನ್ಯ ನೇಮಕಾತಿ ನಿಯಮಗಳು 1977 ರ ನಿಯಮ 6 ರ ಅನುಸಾರ ಇತರ ಅಭ್ಯರ್ಥಿಗಳಿಗೆ ಇರುವ ಗರಿಷ್ಠ ವಯಸ್ಸಿನ ವಯೋಮಿತಿಯೊಳಗಿದ್ದ ಮೀಸಲಾತಿ, ವರ್ಗೀಕರಣದ ಆಧಾರದ ಮೇಲೆ ಬ್ಯಾಕ್ಲಾಗ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಇವರ ವರದಿಯನ್ನು ಆಧರಿಸಿ ಅಂತಿಮವಾಗಿ ಹೆಚ್.ಟಿ. ಶರತ್ಕುಮಾರ್, ಪಿ.ಬಿ. ನವೀನ, ಕೆ. ಭರತ್ ನಾಯಕ್, ಬಿ.ಆರ್. ಸತೀಶ್, ವಿ. ಅಭಿಲಾಶ್, ಎ.ಎನ್. ಪೊನ್ನಪ್ಪ ಇವರನ್ನು ಅರ್ಹ ಅಭ್ಯರ್ಥಿಗಳೆಂದು ಪರಿಗಣಿಸಲಾಗಿದೆ.
ಈ ಸಾಲಿನಲ್ಲಿ ಪ್ರವರ್ಗ-3ಬಿ ಯಲ್ಲಿ ಅರ್ಹ ಅಭ್ಯರ್ಥಿಗಳು ದೊರೆಯದೆ ಇರುವದರಿಂದ ಆನೆ ಕಾವಾಡಿಗ ನೇರ ನೇಮಕಾತಿಯಲ್ಲಿನ ಷರತ್ತಿನ ಅನ್ವಯ ಈ ಹುದ್ದೆಯನ್ನು ಬ್ಯಾಕ್ಲಾಗ್ ಹುದ್ದೆ ಎಂದು ಪರಿಗಣಿಸಲಾಗಿದೆ.
ಅರ್ಹ ಅಭ್ಯರ್ಥಿಗಳ ಪಟ್ಟಿಯಿಂದಾಗಿ ಯಾವದೇ ಅಭ್ಯರ್ಥಿಗಳು ಬಾಧಿತರಾದ್ದಲ್ಲಿ ಆಕ್ಷೇಪಣೆಯನ್ನು ಲಿಖಿತ ರೂಪದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ, ಮಡಿಕೇರಿ ಇವರ ವಿಳಾಸಕ್ಕೆ ಸಲ್ಲಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆನೆ ಕಾವಾಡಿ ಹುದ್ದೆಯ ನೇರ ನೇಮಕಾತಿ ಆಯ್ಕೆ ಅಧಿಕಾರಿ ತಿಳಿಸಿದ್ದಾರೆ.