ವೀರಾಜಪೇಟೆ, ಫೆ. 23: ಮೈತಾಡಿ ಗ್ರಾಮದ ನಿವೃತ್ತ ಯೋಧ ಐಯ್ಯಮಂಡ ರವಿ (49) ಎಂಬವರು ವಾಕಿಂಗ್ ಹೋಗಿ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ ಮಲ್ಲಂಬಟ್ಟಿ ತಿರುವಿನ ಬಳಿ ವೇಗವಾಗಿ ಬಂದ ನಂ ಕೆ.ಎ.05 ಎಂ.ಎಕ್ಸ್ 9071 ರ ಐ.10 ಕಾರು ಡಿಕ್ಕಿಯಾದ ಪರಿಣಾಮವಾಗಿ ರವಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ನಿವೃತ್ತ ಯೋಧ ರವಿ ಬೆಳಿಗ್ಗೆ ಯಾವಾಗಲೂ ಮೈತಾಡಿಯ ಮನೆಯಿಂದ ಮಲ್ಲಂಬಟ್ಟಿಯ ಅಂಗಡಿಯವರೆಗೆ ವಾಕಿಂಗ್ ಮಾಡುವ ಅಭ್ಯಾಸವಿದ್ದು ಎಂದಿನಂತೆ ಇಂದು ಬೆಳಿಗ್ಗೆ 7ಗಂಟೆಗೆ ಅಂಗಡಿಯಿಂದ ಪತ್ರಿಕೆ ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ತಿರುವಿನಲ್ಲಿ ವೇಗವಾಗಿ ಬಂದ ಕಾರು ರವಿ ರಸ್ತೆಯ ಬದಿಯಲ್ಲಿದ್ದರೂ ಡಿಕ್ಕಿ ಹೊಡೆದು ಕೆಲವು ಅಡಿಗಳವರೆಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಅವರ ಬಲದ ಭಾಗದ ಹಣೆ ತಲೆಗೆ ಗಾಯ ಉಂಟಾಗಿದ್ದು ತಲೆಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದೆ. ಹಣೆ ಭಾಗವು ಬದಿಯಲ್ಲಿ ಬಿರುಕುಗೊಂಡಿದೆ. ಮೃತ ರವಿಗೆ ಪತ್ನಿ ಎರಡು ಮಕ್ಕಳಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ ಸುಮಾರು 7-15ಕ್ಕೆ ಕಾರು ಡಿಕ್ಕಿಯಾಗಿ ರವಿ ಸಾವನ್ನಪ್ಪಿದ ಸುದ್ದಿ