ಸುಂಟಿಕೊಪ್ಪ, ಫೆ. 23: ನಾಕೂರು-ಕಾನ್ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ನ 19ನೇ ವರ್ಷದ ಕ್ರೀಡೋತ್ಸವ ತಾ. 24 ರಂದು (ಇಂದು) ಕಾನ್ಬೈಲ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್ನ ಅಧ್ಯಕ್ಷ ಶಂಕರ ನಾರಾಯಣ ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಓಟದ ಸ್ಪರ್ಧೆಯನ್ನು ಬೆಳಿಗ್ಗೆ 10 ಗಂಟೆಗೆ ಬೆಳೆಗಾರ ವಿ.ಕೆ. ವಿಜಯಕುಮಾರ್ ಉದ್ಘಾಟಿಸಲಿದ್ದಾರೆ. ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಮಧ್ಯಾಹ್ನ 12 ಗಂಟೆಗೆ ಅಂದಗೋವೆ ಅಂತರ್ರಾಷ್ಟ್ರೀಯ ಹಾಕಿ ಮಾಜಿ ಕ್ಯಾಪ್ಟನ್ ಕಿರಣ್ ಪೂವಯ್ಯ ಉದ್ಘಾಟಿಸಲಿದ್ದಾರೆ ಎಂದರು.
ಮೊದಲನೇ ಸೆಮಿಫೈನಲ್ ಕಬಡ್ಡಿ ಉದ್ಘಾಟನೆ ಮಧ್ಯಾಹ್ನ 3 ಗಂಟೆಗೆ, ದ್ವಿತೀಯ ಕಬಡ್ಡಿ ಸೆಮಿಫೈನಲ್ ಉದ್ಘಾಟನೆ ಸಂಜೆ 4 ಗಂಟೆಗೆ, ಕಬಡ್ಡಿ ಫೈನಲ್ ಪಂದ್ಯಾವಳಿಯನ್ನು ಸಂಜೆ 5 ಗಂಟೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ವಿವಿಧ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 15,000 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10,000 ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ಪಡೆದ ತಂಡಕ್ಕೆ 5,000 ನಗದು ಹಾಗೂ ಟ್ರೋಫಿ ನೀಡಲಾಗುವದು.
ರಸ್ತೆ ಓಟ, ಮಹಿಳೆಯರಿಗೆ ಪಾಸಿಂಗ್ದ ಬಾಲ್ ಮತ್ತು ಬಾಬಿಂಗ್ದ ಸಿಟಿ ಕ್ರೀಡೆಗಳು ಹಗ್ಗಜಗ್ಗಾಟ ಮಹಿಳೆಯರು ಹಾಗೂ ಪುರುಷರಿಗೆ ಮಕ್ಕಳಿಗೆ ಕಾಳು ಹೆಕ್ಕುವದು ಕಪ್ಪೆ ಜಿಗಿತ, ಗೋಣಿಚೀಲ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಡ್ಯಾನ್ಸ್ಮೇಳೆ ಸಂಜೆ 7 ಗಂಟೆಗೆ ನಡೆಯಲಿದೆ.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುನೀಲ್, ಸಹ ಕಾರ್ಯದರ್ಶಿ ಬಿ.ಎ. ವಸಂತ, ಸಾಂಸ್ಕøತಿಕ ಕಾರ್ಯದರ್ಶಿ ಸುಬ್ರಮಣಿ, ಕ್ರೀಡಾ ಕಾರ್ಯದರ್ಶಿ ಅಶೋಕ, ಖಜಾಂಚಿ ಪಿ.ಎಸ್. ಅನಿಲ್ಕುಮಾರ್ ಇದ್ದರು.