ಮಡಿಕೇರಿ, ಫೆ. 21: ಚಿಂತನ ಪ್ರಕಾಶನ, ಚಿತ್ರದುರ್ಗದ ವತಿಯಿಂದ ನಡೆದ ‘ನವೋದಯ ಕನ್ನಡ ಪರೀಕ್ಷೆ’ಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 52 ವಿದ್ಯಾರ್ಥಿಗಳು ಭಾಗವಹಿಸಿ 29 ಮಂದಿ ಪ್ರಥಮ ದರ್ಜೆ, 16 ಮಂದಿ ದ್ವಿತೀಯ ದರ್ಜೆ ಹಾಗೂ 5 ಮಂದಿ ರ್ಯಾಂಕ್ ವಿಜೇತರಾಗಿದ್ದಾರೆ.

ಕೆ.ಎಂ. ನೂತನ್‍ಕುಮಾರ್ ರಾಜ್ಯ, ಬಿ.ಸಿ. ಟೀನಾ ಮತ್ತು ಬಿ.ಪಿ. ಮೌಲ್ಯ ಜಿಲ್ಲೆ ಹಾಗೂ ಕೆ.ಎಂ. ಯೋಗೇಶ್ ಮತ್ತು ಬಿ.ಎಸ್. ಚೈತ್ರ ತಾಲೂಕು ಹಂತದಲ್ಲಿ ಸಾಧನೆ ತೋರಿದ್ದಾರೆ. ಈ ಪರೀಕ್ಷೆಯ ಸಂಘಟನಾ ಶಿಕ್ಷಕಿಯಾಗಿ ಗ್ರೆಟ್ಟಾ ಮೋನಿಸ್ ಕಾರ್ಯನಿರ್ವಹಿಸಿದ್ದಾರೆ.