ಕೂಡಿಗೆ, ಫೆ. 21: ಲೋಕೋಪಯೊಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರದ ಗಣತಿ ಕೇಂದ್ರವು ಕೂಡಿಗೆಯಲ್ಲಿ ಪ್ರಾರಂಭವಾಗಿದೆ.

ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಗಣತಿಯನ್ನು ಮಾಡಿ ನಮೂದಿಸಿಕೊಳ್ಳುವ ಕಾರ್ಯ ಎರಡು ದಿನಗಳವರೆಗೆ ನಡೆಯಲಿದೆ.

ಈ ಗಣತಿ ಕೇಂದ್ರಕ್ಕೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪೀಟರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವರ್ಷಂಪ್ರತಿ ಗಣತಿ ಕಾರ್ಯ ನಡೆಯುವದರಿಂದ ವಾಹನ ಸಂಚಾರವು ಹೆದ್ದಾರಿ ರಸ್ತೆಯಲ್ಲಿ ಯಾವ ಹಂತದಲ್ಲಿ ಸಾಗುತ್ತವೆ ಮತ್ತು ರಸ್ತೆಯ ಅಭಿವೃದ್ಧಿಗೆ ಇಲಾಖಾತ್ಮಕವಾಗಿ ಚರ್ಚಿಸಿ ಅಭಿವೃದ್ಧಿ ಕೈಗೊಳ್ಳುವ ಸಂಬಂಧ ಈ ಗಣತಿ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಸ್ಥಳೀಯ ಆಟೋ ಚಾಲಕರು ಮತ್ತು ಕಾರು ಚಾಲಕರು, ಗ್ರಾಮಸ್ಥರು ಇದ್ದರು.