ಚೆಟ್ಟಳ್ಳಿ, ಫೆ. 20: ಸಮೀಪದ ಕಾಫಿ ಬೋರ್ಡ್ ಮಾತೃಭೂಮಿ ಸ್ತ್ರೀ ಶಕ್ತಿ ಸಂಘದ ಸಭೆಯು ಇಲ್ಲಿನ ಅಂಗನವಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಚೆಟ್ಟಳ್ಳಿ ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕ ಪ್ರವೀಣ್ ಮಾತನಾಡಿ, ಕಾಫಿ ಬೋರ್ಡ್ ಮಾತೃಭೂಮಿ ಗುಂಪಿನ ಸದಸ್ಯರು ಜನ್-ಧನ್ ಯೋಜನೆ ಹಾಗೂ ಪ್ರಧಾನಮಂತ್ರಿ ಅಟಲ್ ಪೆನ್ಶನ್ ಯೋಜನೆಯನ್ನು ಪಡೆಯಲು ಸಲಹೆ ನೀಡಿದರು.

ಕೃಷಿ ಅಧಿಕಾರಿ ಮಂಜುನಾಥ್ ಮಾತನಾಡಿ, ಮಾತೃಭೂಮಿ ಸಂಘದ ಎಲ್ಲಾ ಸದಸ್ಯರ ದಾಖಲೆಗಳನ್ನು ಪರಿಶೀಲಿಸಿ ಸಾಲ ವ್ಯವಸ್ಥೆಯನ್ನು ಮಾಡುವದಾಗಿ ಭರವಸೆ ನೀಡಿದರು. ಈ ಸಂದರ್ಭ ಸಂಘದ ಸದಸ್ಯರಾದ ಸವಿತಾ, ಸಿಂಧೂ, ಕಮಲ ಮತ್ತಿತ್ತರರು ಇದ್ದರು.