ಕುಶಾಲನಗರ, ಫೆ. 20: ಕುಶಾಲನಗರದ ನೆಹರು ಬಡಾವಣೆಯ ಶ್ರೀ ಬಲಮುರಿ ಸಿದ್ದಿ ವಿನಾಯಕ ದೇವಾಲಯದ 21ನೇ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕ ಎಸ್.ಎಲ್. ನಾಗರಾಜ ಭಟ್ ಮತ್ತು ತಂಡದ ಸದಸ್ಯರು ನೆರವೇರಿಸಿದರು. ಸುತ್ತಮುತ್ತ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕುಶಾಲನಗರ ದೇವಾಲಯ ಒಕ್ಕೂಟ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡು ಸಾಮೂಹಿಕ ಪೂಜೆ ಸಲ್ಲಿಸಿದರು. ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು. ಸಂಜೆ ವಿದ್ಯುತ್ ದೀಪ ಅಲಂಕಾರಗೊಂಡ ಮಂಟಪದಲ್ಲಿ ದೇವರ ಮೆರವಣಿಗೆ ಪ್ರಮುಖ ಬೀದಿಯಲ್ಲಿ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ರೇಣುಕುಮಾರ್, ಉಪಾಧ್ಯಕ್ಷ ಶಿವರಾಂ, ಗೌರವಾಧ್ಯಕ್ಷ ರಾಮಯ್ಯ, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ರಾಮಕೃಷ್ಣ ಆಚಾರ್, ಉಪ ಕಾರ್ಯದರ್ಶಿ ಹನುಮರಾಜು ಮತ್ತು ಸದಸ್ಯರುಗಳು ಇದ್ದರು.