ಕುಶಾಲನಗರ, ಫೆ. 20: ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಮಾಜದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯ ಎಂದು ಕದ್ರಿಯ ಶ್ರೀ ರಾಜೇಶ್ ನಾಥ್ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ನೆಹರು ಬಡಾವಣೆಯ ಶ್ರೀ ಬಲಮುರಿ ಸಿದ್ದವಿನಾಯಕ ದೇವಾಲಯದ 21ನೇ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ದೇವರ ಮತ್ತು ಗುರು ಹಿರಿಯರ ಅನುಗ್ರಹ ಹೊಂದಿದಲ್ಲಿ ಪ್ರತಿಯೊಬ್ಬರೂ ಉನ್ನತಿಯೆಡೆಗೆ ಸಾಗಲು ಸಾಧ್ಯ ಎಂದ ಅವರು ಕಳಕಳಿಯ ಪ್ರಾರ್ಥನೆ ಮೂಲಕ ಸಿದ್ದಿ ಗಳಿಸಬಹುದು ಎಂದರು. ಶ್ರೀ ಬಲಮುರಿ ಸಿದ್ದವಿನಾಯಕ ದೇವಾಲಯ ಸಮಿತಿ ಅಧ್ಯಕ್ಷರಾದ ರೇಣುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯರಾದ ಪಿ.ಎಂ. ಕಾರ್ಯಪ್ಪ, ಕಾವೇರಮ್ಮ, ಪೂವಮ್ಮ ಕಾಳಪ್ಪ ಅವರುಗಳನ್ನು ಸ್ವಾಮೀಜಿಗಳು ಸನ್ಮಾನಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಪ.ಪಂ. ಸದಸ್ಯರಾದ ದಿನೇಶ್, ಶೈಲಾ ಕೃಷ್ಣಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಎಸ್. ಶಿವಾನಂದ್, ದೇವಾಲಯ ಒಕ್ಕೂಟ ಸಮಿತಿ ಉಪಾಧ್ಯಕ್ಷ ಕೆ. ರಾಮದಾಸ್ ಇದ್ದರು.

ದೇವಾಲಯ ಸಮಿತಿ ಉಪಾಧ್ಯಕ್ಷ ಶಿವರಾಂ, ಗೌರವಾಧ್ಯಕ್ಷ ರಾಮಯ್ಯ, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ರಾಮಕೃಷ್ಣ ಆಚಾರ್, ಉಪ ಕಾರ್ಯದರ್ಶಿ ಹನುಮರಾಜು ಮತ್ತು ಸದಸ್ಯರುಗಳು ಇದ್ದರು.