ಸೋಮವಾರಪೇಟೆ, ಫೆ.20: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯ, ನೇರುಗಳಲೆ ಗ್ರಾಮ ವ್ಯಾಪ್ತಿಯ ಪ್ರಗತಿ ಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟ, ಶಾಂತಲಿಂಗೇಶ್ವರ ಕನ್ನಂಬಾಡಿ ಅಮ್ಮ ದೇವಾಲಯ ಸಮಿತಿ, ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ತಾ. 21ರಂದು (ಇಂದು) ದೇವಾಲಯ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಸತ್ಯನಾರಾಯಣ ಪೂಜೆ ಪ್ರಾರಂಭಗೊಳ್ಳಲಿದ್ದು, 11 ಗಂಟೆಗೆ ಮಹಾ ಮಂಗಳಾರತಿ, 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ತಿಳಿಸಿದ್ದಾರೆ.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಶಕ್ತಿ ದಿನಪತ್ರಿಕೆಯ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ಮುಖ್ಯ ಅತಿಥಿಗಳಾಗಿ ಎಸ್‍ಕೆಡಿಆರ್‍ಡಿಪಿಯ ನಿರ್ದೇಶಕ ಎ. ಯೋಗೀಶ್, ತಾ.ಪಂ. ಮಾಜೀ ಅಧ್ಯಕ್ಷರುಗಳಾದ ಎಸ್.ಎಂ. ಡಿಸಿಲ್ವಾ, ಜಿ.ಬಿ. ಸೋಮಯ್ಯ, ಠಾಣಾಧಿಕಾರಿ ಶಿವಶಂಕರ್, ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಪ್ರಭಾಕರ್, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ಪ್ರಗತಿಪರ ಕೃಷಿಕ ಎ.ಜಿ. ಅಜಿತ್‍ಕುಮಾರ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.