*ಗೋಣಿಕೊಪ್ಪಲು, ಫೆ. 20 : ಸುಮಾರು 400 ವರ್ಷಗಳ ಇತಿಹಾಸವಿರುವ ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವಸ್ಥಾನದ ವಾರ್ಷಿಕೋತ್ಸವ ತಾ. 21 ರಿಂದ (ಇಂದಿನಿಂದ) ನಡೆಯಲಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಎಸ್.ಪಿ. ದೇವಯ್ಯ ತಿಳಿಸಿದ್ದಾರೆ. ಸಾಯಂಕಾಲ 7 ಗಂಟೆಗೆ ಕೊಡಿಮರ ನಿಲ್ಲಿಸುವದರೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ.
ಉತ್ಸವ ಸಮಯದಲ್ಲಿ ಹರಕೆ ಬಳಕು ಪೂಜೆ ಮಾಡಿಸುವವರು ಕೊಡಿಮರ ನಿಲ್ಲುವ ದಿವಸ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಅನ್ನ ಸಂತರ್ಪಣೆ : ಉತ್ಸವ ಮುಗಿಯವವರೆಗೆ ದೇವಸ್ಥಾನದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದೆ. ಭಕ್ತಾದಿಗಳು ಅಕ್ಕಿ, ತರಕಾರಿ, ತೆಂಗಿನಕಾಯಿ, ಎಣ್ಣೆ ಇತ್ಯಾದಿಗಳನ್ನು ದೇವಸ್ಥಾನಕ್ಕೆ ತಲುಪಿಸುವಂತೆ ತಕ್ಕ ಮುಖ್ಯಸ್ಥ ಮಣೆಯಪಂಡ, ಬಿದ್ದಪ್ಪ, ಅಧ್ಯಕ್ಷ ಅಡ್ಡಂಡ ಜಾಲಿತಿಮ್ಮಯ್ಯ ತಿಳಿಸಿದ್ದಾರೆ.