ಮೂರ್ನಾಡು, ಫೆ. 20: ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕುಟುಂಬಗಳಿಗೆ ಮೂರ್ನಾಡು ಕೊಡವ ಸಮಾಜದ ವತಿಯಿಂದ ಪರಿಹಾರ ಧನ ನೀಡಲಾಯಿತು.

ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಇಗ್ಗೋಡ್ಲುವಿನ ಜಗ್ಗಾರಂಡ ದೇವಯ್ಯ, ಮಧುರ ಕುಮಾರ್, ಜಗ್ಗಾರಂಡ ಕಾವೇರಪ್ಪ, ಮೂವತ್ತೋಕ್ಲುವಿನ ಮುಕ್ಕಾಟಿರ ತಂಗಮ್ಮ, ಶಿರಂಗಳ್ಳಿಯ ಉಡವೇರ ಲೋಕೇಶ್ ಹಾಗೂ ಮೇಘತ್ತಾಳುವಿನ ಮಡ್ಲಂಡ ಪೂವಯ್ಯ ಅವರುಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ಧನ ನೀಡಲಾಯಿತು.

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಯು. ಗಣೇಶ್, ಉಪಾಧ್ಯಕ್ಷ ನಂದೇಟಿರ ದೇವಯ್ಯ, ಕಾರ್ಯದರ್ಶಿ ದೇವಂಡಿರ ಗಣಪತಿ, ಖಜಾಂಚಿ ಚೇನಂಡ ಅಯ್ಯಣ್ಣ, ವ್ಯವಸ್ಥಾಪಕ ಮೂಡೇರ ಮನು ಮಾದಪ್ಪ, ನಿರ್ದೇಶಕರಾದ ಬಡುವಂಡ ಬೋಪಣ್ಣ, ಪುದಿಯೊಕ್ಕಡ ವಿಪನ್ ಸೋಮಯ್ಯ, ಮಡೆಯಂಡ ಪ್ರೀಣ, ಬಡುವಂಡ ಹರೀಶ್, ಮಂಡೇಟಿರ ಚಂಗಪ್ಪ, ಕ್ಯಾತಂಡ ರಂಜು ಕಾರ್ಯಪ್ಪ, ಮೂಡೇರ ಪವಿತ, ನೆರವಂಡ ಕವಿತ ಹಾಜರಿದ್ದರು.