ಗೋಣಿಕೊಪ್ಪ ವರದಿ, ಫೆ. 20: ಪೊನ್ನಂಪೇಟೆ ಕಾಟ್ರಕೊಲ್ಲಿ ಮಾತಾಯಿ ಪುರುಷರ ಸ್ವಸಹಾಯ ಸಂಘದ ವತಿಯಿಂದ ಮಾರ್ಚ್ 4 ರಂದು ನಡೆಯಲಿರುವ ಮಹಾ ಶಿವರಾತ್ರಿ ಹಬ್ಬವನ್ನು ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಆಚರಿಸಲಾಗುವದು ಎಂದು ಕಾಟ್ರಕೊಲ್ಲಿ ಮಾತಾಯಿ ಪುರುಷರ ಸ್ವಸಹಾಯ ಸಂಘದ ಸದಸ್ಯ ಕೆ.ಬಿ. ವಿನೋದ್ ತಿಳಿಸಿದ್ದಾರೆ.

ಅಂದು ಸಂಜೆ 7 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸ್ಥಳೀಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಅನ್ನದಾನ ಶೈಲೂ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸ್ಥಳೀಯ ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಲು ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಾಲ್ಗೊಳ್ಳುವ ಮಕ್ಕಳು ಹೆಸರು ನೋಂದಾಯಿಸಿಕೊಳ್ಳಬೇಕಿದೆ. ನೃತ್ಯ, ಹಾಡುಗಾರಿಕೆ ಮುಂತಾದ ಕಲಾಪ್ರದರ್ಶನ ನೀಡಬಹುದಾಗಿದೆ ಎಂದರು. ಹೆಚ್ಚಿನ ಮಾಹಿತಿಗೆ 9611250962, 9740976957 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಮಾತಾಯಿ ಪುರುಷರ ಸ್ವಸಹಾಯ ಸಂಘ ಅಧ್ಯಕ್ಷ ಎಂ.ಎಂ. ಸಾಧಿಕ್, ಕಾರ್ಯದರ್ಶಿ ಇ.ಎ. ಹರೀಶ್ ಉಪಸ್ಥಿತರಿದ್ದರು.