ಶನಿವಾರಸಂತೆ, ಫೆ. 20: ಪಟ್ಟಣದ ಮಂಜುನಾಥ ಸ್ವಾಮಿ ಪಾದಯಾತ್ರಾ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಾ. 1 ರಿಂದ 4 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 21ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿ ಕೊಳ್ಳಲಾಗಿದೆ.

ಶನಿವಾರಸಂತೆಯಿಂದ ಕೂಡುರಸ್ತೆ, ಬಿಸ್ಲಿ, ಸುಬ್ರಹ್ಮಣ್ಯ, ಕೊಕ್ಕಡ, ಸೌತಡ್ಕ ಮೂಲಕ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಯಲಿದೆ. ಪಾಲ್ಗೊಳ್ಳಬಯಸುವ ಪಾದಯಾತ್ರಿಗಳು ಮಾ. 1 ಬೆಳಿಗ್ಗೆ 8.30 ರೊಳಗೆ ಶನಿವಾರಸಂತೆ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಬಂದು ಸೇರಬೇಕು. ಗಣಪತಿಗೆ ಪೂಜೆ ಸಲ್ಲಿಸಿ 9 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುವದು ಎಂದು ಸಮಿತಿ ಪದಾಧಿಕಾರಿಗಳಾದ ಎ.ಡಿ. ಮೋಹನ್‍ಕುಮಾರ್, ರಾಜು, ಸಿ.ವಿ. ಜಯಪ್ಪಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9448919518, 9448648509 ಸಂಪರ್ಕಿಸಬಹುದು.