ಚೆಟ್ಟಳ್ಳಿ, ಫೆ. 20: ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರಿಂದ ವಿದ್ಯಾರ್ಥಿನಿ ಸಂಧ್ಯಾ ಅವರ ಮನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಸರಿತಾ ಪೂಣಚ್ಚ ಭೇಟಿ ನೀಡಿ ಸಾಂತ್ವನ ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ ಕೂಡಲೇ ಸರ್ಕಾರ ಪರಿಹಾರ ಹಾಗೂ ಸವಲತ್ತುಗಳನ್ನು ನೀಡಬೇಕೆಂದು ಮನವಿ ಮಾಡಿರುವದಾಗಿ ತಿಳಿಸಿದರು .
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಸದಸ್ಯರಾದ ವಿ.ಕೆ ಜಾಫರ್, ಸುಶೀಲ, ಸರೋಜ, ಶಾರದಾ ,ಪೂವಮ್ಮ, ದೇವಜಾನು, ಪ್ರೇಮಾ ಸೇರಿದಂತೆ ಮತ್ತಿತರರು ಇದ್ದರು.