ಗೋಣಿಕೊಪ್ಪಲು, ಫೆ.20: ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಪಂಚಾಯಿತಿ, ಯುವ ಒಕ್ಕೂಟ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕು ಮತ್ತು ಶ್ರೀ ಆದಿ ಶಕ್ತಿ ಯುವತಿ ಮಂಡಳಿ ಇವರ ಸಂಯುಕ್ತಾಶ್ರಾಯದಲ್ಲಿ ತಾ.24ರಂದು ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮೀಣ ಕ್ರೀಡೆ ನಡೆಯಲಿದೆ.

ಪುರುಷರಿಗೆ ಕಬ್ಬಡ್ಡಿ, ಪಂದ್ಯಾಟ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಆಲೇಮಾಡ ಸುಧೀರ್, ಪೊನ್ನಂಪೇಟೆ ಎಪಿಸಿಎಂಎಸ್‍ನ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾಬೋಪಣ್ಣ, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕರ್ನಾಟಕ ರಾಜ್ಯ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಕಡೇಮಾಡ ಕುಸುಮ ಜೋಯಪ್ಪ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆಂದು ಶ್ರೀ ಆದಿ ಶಕ್ತಿ ಯುವತಿ ಮಂಡಳಿಯ ಪದಾಧಿಕಾರಿಗಳಾದ ಚಿಮ್ಮಣಮಾಡ ಧರಣಿ ಗಣೇಶ್ ಹಾಗೂ ಮುಕ್ಕಾಟೀರ ದಿವ್ಯ ಸುಬ್ಬಯ್ಯ ತಿಳಿಸಿದ್ದಾರೆ.