ಸಿದ್ದಾಪುರ,ಫೆ.19: ಇತ್ತೀಚೆಗೆ ಸಿದ್ದಾಪುರ ಸಮೀಪದ ಎಮ್ಮೆಗುಂಡಿ ಕಾಫಿತೋಟದಲ್ಲಿ ಮನೆಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಂಧ್ಯಾ ಎಂಬಾಕೆ ಯನ್ನು ಹೊರ ರಾಜ್ಯದ ಕಾರ್ಮಿಕರಿಬ್ಬರು ಅಪಹರಣ ಮಾಡಿ ಕೊಲೆಗೈದಿದ್ದರು. ಈ ಹಿನ್ನೆಲೆಯಲ್ಲಿ ಮೃತ ಸಂಧ್ಯಾಳ ನಿವಾಸಕ್ಕೆ ತಾಲೂಕು ಆಡಳಿತ ವತಿಯಿಂದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಬಿ.ಎಂ ಗೋವಿಂದರಾಜ್ ಭೇಟಿ ನೀಡಿ ತುರ್ತು ಪರಿಹಾರವಾಗಿ ಶವ ಸಂಸ್ಕಾರ ವೆಚ್ಚ ರೂ. 5 ಸಾವಿರವನ್ನು ನೀಡಿ ಸಾಂತ್ವನ ಹೇಳಿದರು. ಅಲ್ಲದೇ ಸರಕಾರದಿಂದ ಸಿಗುವ ಪರಿಹಾರಕ್ಕೆ ಸಮಾಜ ಕಲ್ಯಾಣ ಇಲಾಖೆಗೆ ಬೇಕಾದಂತಹ ದಾಖಲಾತಿಗಳನ್ನು ಕೂಡಲೇ ತಾಲೂಕು ಆಡಳಿತ ಮೂಲಕ ಒದಗಿಸಿಕೊಡಲಾಗುವದೆಂದು ತಿಳಿಸಿದರು. ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಸಂತೋಷ್, ಅನಿಲ್ ಕುಮಾರ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಹಾಜರಿದ್ದರು.