ವೀರಾಜಪೇಟೆ, ಫೆ. 19: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ಮಾಧ್ಯಮದಲ್ಲಿ ಚಿತ್ರಕಲೆಯ ಬಳಕೆ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಚಿತ್ರಕಲೆ ಕಲಾವಿದ ಸತೀಶ್ ಬಿ.ಆರ್. ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಆಗಮಿಸಿ ಪ್ರಾತ್ಯಕ್ಷತೆ ಮೂಲಕ ವಿದ್ಯಾರ್ಥಿಗಳಿಗೆ ಮಾಧ್ಯಮದಲ್ಲಿ ಚಿತ್ರಕಲೆಯ ಬಳಕೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಹಾಗೂ ದೈಹಿಕ ನಿರ್ದೇಶಕಿ ಡಾ. ಎಂ.ಎಂ. ದೇಚಮ್ಮ ಹಾಜರಿದ್ದರು.