ಗೋಣಿಕೊಪ್ಪ ವರದಿ, ಫೆ. 19: ಶಾಸಕರ ಅನುದಾನ ಹಾಗೂ ಮಳೆ ಹಾನಿ ಪರಿಹಾರ ಅನುದಾನದ ಒಟ್ಟು ರೂ. 68 ಲಕ್ಷ ಅನುದಾನದಲ್ಲಿ ಪೊನ್ನಂಪೇಟೆ ಗ್ರಾಮದ 9 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಶಾಸಕರ ಅನುದಾನದಲ್ಲಿ 50 ಲಕ್ಷ ಹಾಗೂ ಮಳೆ ಪರಿಹಾರ ಶಾಸಕರ ನಿಧಿಯ ರೂ. 18 ಲಕ್ಷ ಅನುದಾನ ಒಟ್ಟು 68 ರೂ. ಲಕ್ಷ ಅನುದಾನದ ಕಾಮಗಾರಿಗೆ ಪೂಜೆ ನೆರವೇರಿಸಿದರು.
ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ರಸ್ತೆಗಳಿಗಾಗಿ ತಲಾ 10 ಲಕ್ಷ ಅನುದಾನದಲ್ಲಿ ಪಟ್ಟಣದ ಮುಖ್ಯರಸ್ತೆಯಿಂದ ನೆಹರು ನಗರ ರಸ್ತೆ ಅಭಿವೃದ್ಧಿ, ಕಾಟ್ರಕೊಲ್ಲಿ-ಹುದೂರು ರಸ್ತೆ, ಸಾಯಿಶಂಕರ್ ಶಾಲೆ ರಸ್ತೆ, ಕಲ್ಲುಕೋರೆ ರಸ್ತೆ, ಜೋಡುಬೀಟಿ-ಸಿಐಟಿ ಕಾಲೇಜು ರಸ್ತೆಗಳ ಅಭಿವೃಧ್ಧಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಮಳೆ ಪರಿಹಾರ ನಿಧಿಯ ರೂ. 18 ಲಕ್ಷ ಅನುದಾನದಲ್ಲಿ 4 ಕಾಮಗಾರಿಗಳಿಗೆ ಪೂಜೆ ನಡೆಸಲಾಯಿತು. ಕೊಡವ ಸಮಾಜ ಕ್ಲಬ್ – ಮತ್ತೂರು ಸಂಪರ್ಕ ರಸ್ತೆಗೆ 15 ಲಕ್ಷ, ತಲಾ 1 ಲಕ್ಷ ಅನುದಾನದಲ್ಲಿ ಸ್ಪೋಟ್ರ್ಸ್ ಕ್ಲಬ್- ವಸಂತನಗರ ರಸ್ತೆ, ತ್ಯಾಗರಾಜ ರಸ್ತೆ, ಗಣಪತಿನಗರ ಸಾರ್ವಜನಿಕ ರಸ್ತೆಗಳಿಗೆ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಪೊನ್ನಂಪೇಟೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಪ್ರ. ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಹಿರಿಯರಾದ ಚೆಪ್ಪುಡೀರ ಪೊನ್ನಪ್ಪÀ ಇತರರು ಇದ್ದರು. - ಸುದ್ದಿಪುತ್ರ