ಮಡಿಕೇರಿ, ಫೆ. 19: ಜಿಲ್ಲೆಯಲ್ಲಿ ಮುಂದೆ ಸಂಭವಿಸಬಹುದಾದ ವಿಕೋಪದಿಂದಾಗುವ ಹಾನಿಯನ್ನು ತಪ್ಪಿಸಲು ಗ್ರಾಮ ವಿಪತ್ತು ನಿರ್ವಹಣಾ ಯೋಜನೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯೂನಿಸೆಫ್ ಬೆಂಬಲಿತ ಸಮಗ್ರ ಕೊಡಗು ಸ್ಪಂದನಾ ಯೋಜನೆಯಡಿ ಗ್ರಾಮೀಣ ಮಟ್ಟದಲ್ಲಿ ರೂಪಿಸಲಾಗುತ್ತಿದೆ.

ಆ ದಿಸೆಯಲ್ಲಿ ಸಾರ್ವಜನಿಕ ರೊಂದಿಗೆ ಚರ್ಚಿಸಲು ಗ್ರಾ.ಪಂ. ಮಟ್ಟದಲ್ಲಿ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದಲ್ಲಿ ತುರ್ತು ಪರಿಹಾರ ಕ್ರಮವನ್ನು ಸುಲಲಿತವಾಗಿ ಕೈಗೊಳ್ಳಲು ಸಾರ್ವಜನಿಕರ ಅಭಿüಪ್ರಾಯ ಪಡೆಯಲಾಗುತ್ತದೆ. ಸ್ಥಳೀಯ ಸಂಪನ್ಮೂಲ ಗುರುತಿಸಿ ಮುಂದಿನ ಯೋಜನೆ ಮತ್ತು ಸಾಮಥ್ರ್ಯಧಾರಣ ತರಬೇತಿ ಸಂಘಟಿಸುವದು ಪ್ರಮುಖ ಉದ್ದೇಶವಾಗಿದೆ ಎಂದು ಜಿ.ಪಂ. ಸಿಇಒ ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.

ಗ್ರಾ.ಪಂ. ಮಟ್ಟದಲ್ಲಿ ಸಭೆಯ ವಿವಿರ ಇಂತಿದೆ: ತಾ. 21 ರಂದು ಗಾಳಿಬೀಡು, ತಾ. 22 ರಂದು ಮದೆ, ಕೆ. ನಿಡುಗಣೆ, ಮಕ್ಕಂದೂರು, ತಾ. 23 ರಂದು ಬೆಟ್ಟಗೇರಿ, ಕುಂದಚೇರಿ, ಬೆಂಗೂರು, ತಾ. 25 ರಂದು ಕಾಂತೂರು-ಮೂರ್ನಾಡು, ಮೇಕೇರಿ, ಹೊದ್ದೂರು, ತಾ. 26 ರಂದು ಗರ್ವಾಲೆ, ಮಾದಾಪುರ, ತಾ. 27 ಮುಳ್ಳುಸೋಗೆ, ಕೂಡು ಮಂಗಳೂರು, ಕೂಡಿಗೆ, ತಾ. 28 ರಂದು ನೆಲ್ಲಿಹುದಿಕೇರಿ, ಗುಡ್ಡೆಹೊಸುರು.

ಮಾರ್ಚ್ 1 ರಂದು ಶಾಂತಳ್ಳಿ, ಐಗೂರು, ಗೌಡಳ್ಳಿ, ತೊಳೂರು-ಶೆಟ್ಟಳ್ಳಿ, ಮಾ. 2 ರಂದು ವಾಲ್ನೂರು-ತ್ಯಾಗತ್ತೂರು, ಚೆಟ್ಟಳ್ಳಿ, ಮಾ. 5 ರಂದು ಕೆದಕಲ್, ಕಂಬಿಬಾಣೆ, ಕೊಡಗರಹಳ್ಳಿ, ಮಾ. 6 ರಂದು ಚೌಡ್ಲು, ಗೌಡಳ್ಳಿ, ಮಾ. 7 ರಂದು ಸಂಪಾಜೆ, ಹೆಬ್ಬಾಲೆ, ಮಾ. 8 ರಂದು ಬೇಳೂರು, ಮರಗೋಡು, ಹಾನಗಲ್ ಗ್ರಾ.ಪಂ. ಗಳಲ್ಲಿ ಆಯಾಯ ದಿನಗಳಂದು ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದೆ ಎಂದು ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.