ಗೋಣಿಕೊಪ್ಪಲು, ಫೆ. 19: ಪತ್ರಿಕೋದÀ್ಯಮ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಅನುಭವ ಮೂಲಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗೋಣಿಕೊಪ್ಪ ಪ್ರೆಸ್‍ಕ್ಲಬ್ ಆಯೋಜಿಸಿದ್ದ ಕ್ಯಾಂಪಸ್ ಟು ನ್ಯೂಸ್ ಫೀಲ್ಡ್ ಕಾರ್ಯಕ್ರಮಕ್ಕೆ ಈ ಸಂದರ್ಭ ಚಾಲನೆ ನೀಡಲಾಯಿತು. ವೀರಾಜಪೇಟೆ ಕಾವೇರಿ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಕೆ.ಎಸ್. ತಿಮ್ಮಯ್ಯ, ಗಿರಿತ್ ಗಣಪತಿ, ಕೆ.ಬಿ. ಗಂಗಮ್ಮ, ನಿಶಾ ಮಾದಪ್ಪ, ಮಹೇಶ್, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಪಿಡಿಒ ಚಂದ್ರಮೌಳಿ ಉದ್ಘಾಟಿಸಿದರು. ಈ ಸಂದರ್ಭ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಉಪಸ್ಥಿತರಿದ್ದರು. ಕಾರ್ಯದರ್ಶಿ ಹೆಚ್.ಕೆ. ಜಗದೀಶ್ ನಿರೂಪಿಸಿದರು.