ಮಡಿಕೇರಿ, ಫೆ. 17: ವಿಆರ್ ಯುವರ್ ವಾಯ್ಸ್ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ವಿಕಲಾಂಗ ವ್ಯಕ್ತಿಗಳಿಗಾಗಿ ಲೋಕೊಮೋಟರ್, ಶ್ರವಣದೋಷ ಮತ್ತು ದೃಷ್ಟಿಹೀನ ವಿಕಲತೆಯಿರುವ, ವಿದ್ಯಾರ್ಹತೆ ಹತ್ತನೆ ತರಗತಿ, ದ್ವಿತೀಯ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮ ಮತ್ತು ಪದವಿ ಉತ್ತೀರ್ಣರಾಗಿರುವ ವಿಕಲಾಂಗರಿಗೆ ಉದ್ಯೋಗ ಮೇಳವನ್ನು ತಾ. 24 ರಂದು ಕೆಎಸ್‍ಆರ್‍ಪಿ. ಕ್ರೀಡಾ ಮೈದಾನ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಮಡಿವಾಳ ಮಾರುಕಟ್ಟೆಯ ಹತ್ತಿರ, ಕೋರಮಂಗಲ, ಬೆಂಗಳೂರು-560034 ಇಲ್ಲಿ ಹಮ್ಮಿಕೊಂಡಿದ್ದು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿಕಲಚೇತನರು ಕಡ್ಡಾಯವಾಗಿ ತಿತಿತಿ.ತಿeಚಿಡಿeಥಿouಡಿ voiಛಿe.oಡಿg ನಲ್ಲಿ ನೋಂದಾಯಿಸಿಕೊಳ್ಳುವಂತೆ ಕೋರಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ. 7557550888, 75507550999, 9700799993, 9551500061 ನ್ನು ಸಂಪರ್ಕಿಸಬಹುದು. ಈ ಉದ್ಯೋಗ ಮೇಳದ ಪ್ರಯೋಜನವನ್ನು ಕೊಡಗು ಜಿಲ್ಲೆ ವಿಕಲಚೇತನರು ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಕೋರಿದ್ದಾರೆ.