ಮಡಿಕೇರಿ, ಫೆ. 17: ಜಿಲ್ಲೆಯಲ್ಲಿ ಕಳೆದ ಮಳೆಗಾಲದ ಸಂದರ್ಭದಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಈ ಬಾರಿ ಕೈಬಿಡಲಾಗಿದೆ. ಕೊಡವ ಹಾಕಿ ಅಕಾಡೆಮಿ ಅಧೀನದಲ್ಲಿ ಈ ಉತ್ಸವ ಆಯೋಜಿಸಲು ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕುಟುಂಬದಿಂದ ಪ್ರತಿವರ್ಷ ಈ ಉತ್ಸವ ನಡೆದುಕೊಂಡು ಬರುತ್ತಿದೆ. ಪ್ರಸಕ್ತ ವರ್ಷ ಸಂತ್ರಸ್ತರಾದವರಿಗೆ ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಉತ್ಸವ ಕೈಬಿಡಲಾಗಿದೆ. ಆದರೆ ಸಣ್ಣ ಪ್ರಮಾಣದಲ್ಲಿಯಾದರೂ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಡೆಸಿ ಇದನ್ನು ಜೀವಂತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಕುಟುಂಬಗಳಿಂದ ಬಂದ ಸಲಹೆ ಹಾಗೂ ಅಭಿಪ್ರಾಯದಂತೆ ಹಾಕಿ ಕೂರ್ಗ್ ಸಂಸ್ಥೆ ಒಂದು ವರ್ಷ ಮಟ್ಟಿಗೆ ಸರಳ ರೀತಿಯಲ್ಲಿ ವಿಭಿನ್ನವಾಗಿ ಈ ಪಂದ್ಯಾವಳಿಯನ್ನು ಆಯೋಜಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ. ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಮಾಜಿ ಅಂತರ್ರಾಷ್ಟ್ರೀಯ ಆಟಗಾರ ಬುಟ್ಟಿಯಂಡ ಚಂಗಪ್ಪ ಅವರು ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಚಿಂತನೆಗಳ ಕುರಿತು ಮಾಹಿತಿ ನೀಡಿದರು.

ಹಾಕಿ ಕೂರ್ಗ್‍ಗೆ ಈ ಅಪೇಕ್ಷೆ ಇರಲಿಲ್ಲ; ಆದರೆ ಹಲವು ಕುಟುಂಬದವರು ಸಂಪರ್ಕಿಸಿದ ಕಾರಣ ಇದನ್ನು ಪರಿಗಣಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ಮೂರನೇ ವಾರದಿಂದ ಪಂದ್ಯಾವಳಿಯನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಕಾಕೋಟುಪರಂಬುವಿನಲ್ಲಿ ಪಂದ್ಯ : ಅಂದಾಜು ರೂ. 18 ರಿಂದ 20 ಲಕ್ಷ ವೆಚ್ಚದಲ್ಲಿ ಈ ಪಂದ್ಯಾಟ ನಡೆಸುವ ಕುರಿತು ಚರ್ಚಿಸಲಾಗಿದೆ. ಕಾಕೋಟುಪರಂಬುವಿನಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಅಂದಾಜು 100 ಕುಟುಂಬಗಳನ್ನು ಖಚಿತವಾಗಿ ನಿರೀಕ್ಷಿಸಲಾಗಿದೆ. ಆದರೂ 100 ರಿಂದ 150 ಕುಟುಂಬಗಳು ಭಾಗವಹಿಸುವ ಸಾಧ್ಯತೆ ಇದ್ದು ತಂಡಗಳ ಸಂಖ್ಯೆ 150 ಆದರೆ, ಇಷ್ಟಕ್ಕೆ ಸೀಮಿತಗೊಳಿಸ ಲಾಗುವದು. ಕಾಕೋಟುಪರಂಬುವಿನ ಎರಡು ಮೈದಾನಗಳನ್ನು ಬಳಸಿಕೊಳ್ಳಲಾಗುವದು.

ಎರಡು ರೀರಿಯ ಪಂದ್ಯಾವಳಿ : ಕೌಟುಂಬಿಕವಾಗಿ ಒಂದು ಪಂದ್ಯಾವಳಿ ಹಾಗೂ ಮತ್ತೊಂದು ಆಹ್ವಾನಿತ ಕೌಟುಂಬಿಕ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಹೆಸರಿನಲ್ಲಿ ಪಂದ್ಯ ನಡೆಸಲು ಉದ್ದೇಶಿಸಲಾಗಿದೆ.

ಆಹ್ವಾನಿತ ಕೌಟುಂಬಿಕ ತಂಡಗಳ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ 8 ತಂಡವನ್ನು ಪರಿಗಣಿಸಲಾಗಿದೆ. ಇದು 10 ರಿಂದ 12 ತಂಡಕ್ಕೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

(ಮೊದಲ ಪುಟದಿಂದ) ಟರ್ಫ್ ಮೈದಾನದಲ್ಲಿ ಪಂದ್ಯಾಟ ನಡೆಸಿದರೆ ನೀರಿನ ಸಮಸ್ಯೆ ಹಾಗೂ ಆಟಗಾರರು ಗಾಯಗೊಳ್ಳುವ ಸಂಭವb ಗಳಿರುವದರಿಂದ (ಮೊದಲ ಪುಟದಿಂದ) ಟರ್ಫ್ ಮೈದಾನದಲ್ಲಿ ಪಂದ್ಯಾಟ ನಡೆಸಿದರೆ ನೀರಿನ ಸಮಸ್ಯೆ ಹಾಗೂ ಆಟಗಾರರು ಗಾಯಗೊಳ್ಳುವ ಸಂಭವb ಗಳಿರುವದರಿಂದ ಪ್ರಮುಖರಿಂದ ಹೊಸ ಸ್ವರೂಪದ ಸಲಹೆಗಳೂ ಕೇಳಿಬಂದಿವೆ ಎಂದು ಅವರು ಮಾಹಿತಿಯಿತ್ತರು.

ಯಾವದಾದರೂ ಕುಟುಂಬ ಗಳು ಪ್ರಾಯೋಜಕತ್ವಕ್ಕೆ ಮುಂದೆ ಬಂದಲ್ಲಿ ಇದನ್ನು ಬಳಸಿಕೊಂಡು ಪಂದ್ಯಾವಳಿ ನಡೆಸುವ ಸಲಹೆ ಬಂದಿದೆ. ಒಂದು ಅಥವಾ ನಾಲ್ಕು ಕುಟುಂಬಗಳು ತಲಾ ರೂ. 5 ಲಕ್ಷದಂತೆ ಹಣ ನೀಡಿದಲ್ಲಿ ಈ ಪ್ರಾಯೋಜಕತ್ವದಂತೆ ಪಂದ್ಯಾವಳಿ ನಡೆಸುವ ಅಭಿಪ್ರಾಯ ನೀಡಿರುವ ಹಲವರು ಇದರಿಂದ ಸಣ್ಣ ಪ್ರಮಾಣದಲ್ಲಿ ಪಂದ್ಯಾವಳಿ ನಡೆಸುವ ಆಸಕ್ತಿ ಹೊಂದಿರುವ ಕುಟುಂಬಗಳಿಗೆ ಸಹಕಾರ ವಾದಂತಾಗುತ್ತದೆ ಎಂಬ ಸಲಹೆ ಅವರಿಂದ ಬಂದಿದೆ.

ಈ ರೀತಿಯಲ್ಲಾದರೆ ‘ಹಾಕಿ ಕೂರ್ಗ್ ಕೂರ್ಗ್ ಫ್ಯಾಮಿಲಿ ಚಾಂಪಿಯನಶಿಪ್ ಫಾರ್ 2019’’ ಆರ್ಗನೈಜಡ್ ಬೈ ............ ಕುಟುಂಬಗಳು ಎಂಬ ಹೆಸರಿನ ಮೂಲಕ ಪಂದ್ಯಾವಳಿ ನಡೆಸುವ ಚಿಂತನೆಯೂ ಒಂದೆಡೆಯಿರು ವದಾಗಿ ಹೇಳಿದ ಅವರು ಚಾಂಪಿಯನ್ಸ್ ಟ್ರೋಫಿ ಪ್ರತ್ಯೇಕವಾಗಿರುವದಾಗಿ ತಿಳಿಸಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುಟುಂಬದಿಂದ ರೂ. 2 ಸಾವಿರ ಪ್ರವೇಶ ಶುಲ್ಕ ಪಡೆಯಲಾಗುವದು. ಇದರಲ್ಲಿ ರೂ. 1 ಸಾವಿರವನ್ನು ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ನೀಡಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಸದ್ಯದಲ್ಲಿ ಸಭೆ : ಈ ಪಂದ್ಯಾವಳಿಯ ಕುರಿತು ಅಂತಿಮ ರೂಪು - ರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಮಾರ್ಚ್ ಆರಂಭದಲ್ಲಿ ವೀರಾಜಪೇಟೆಯಲ್ಲಿ ಸಭೆ ಯೊಂದನ್ನು ಆಯೋಜಿಸ ಲಾಗುತ್ತಿದೆ. ಇದರ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗು ವದು ಎಂದು ಚಂಗಪ್ಪ ತಿಳಿಸಿದರು.