ಮಡಿಕೇರಿ, ಫೆ.16: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರಕಾಲೇಜು ಮಟ್ಟದ ಭೌತಶಾಸ್ತ್ರ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಭಾಗಮಂಡಲದ ಎ.ಜಿ.ಸವಿತಾ ನ್ಯಾನೋ ಟೆಕ್ನಾಲಜಿ ವಿಷಯದಲ್ಲಿ ವಿಚಾರ ಮಂಡಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಭಾಗಮಂಡಲ ಹೋಬಳಿ ಕೋರಂಗಾಲ ಗ್ರಾಮದ ಎ.ಆರ್.ಗೌರಿ ಶಂಕರ್ ಭಟ್ ಹಾಗೂ ರಜನಿ ದಂಪತಿಗಳ ಪುತ್ರಿಯಾಗಿದ್ದು, ಪುತ್ತೂರು ತಾಲೂಕು ರಾಮಕುಂಜದ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಪ್ರಥಮ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.