ಗುಡ್ಡೆಹೊಸೂರು, ಫೆ. 16: ಬಸವನಹಳ್ಳಿಯ ಬಳಿ ಇಲ್ಲಿನ ಯುವಕರಾದ ಅಡ್ವಿನ್ ಮತ್ತು ವಿಶ್ವ ಎಂಬವರು ಕುಶಾಲನಗರ ಕಡೆಗೆ ಸ್ಕೂಟರ್‍ನಲ್ಲಿ ಪ್ರಯಾಣಿಸುತ್ತಿದ್ದರು. ಬಸವನಹಳ್ಳಿಯ ಇಳಿಜಾರು ಪ್ರದೇಶದ ರಸ್ತೆಬದಿಯ ಮೈಲುಕಲ್ಲಿಗೆ ಸ್ಕೂಟರ್ ಡಿಕ್ಕಿಯಾಗಿದೆ.ಈ ಸಂದರ್ಭ ಯುವಕರು ಸುಮಾರು 100ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಅಲ್ಲದೆ ಕಲ್ಲಿಗೆ ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಎರಡು ತುಂಡಾಗಿ ರಸ್ತೆಗೆ ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವಕರನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೊಂದು ಪವಾಡ ಸದೃಶ ಘಟನೆಯಾಗಿದೆ. - ಗಣೇಶ್ ಕುಡೆಕ್ಕಲ್