ಮಡಿಕೇರಿ, ಫೆ. 16: ಕಾಶ್ಮೀರದಲ್ಲಿ ಉಗ್ರರ ಧಾಳಿಗೆ ಬಲಿಯಾದ ವೀರಯೋಧರಿಗೆ ತಾ. 15ರ ಸಂಜೆ ಗುಡ್ಡೆಹೊಸೂರುವಿನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರಿನ ನೂರಾರು ಮಂದಿ, ಸ್ಥಳೀಯ ಮಾಜಿ ಯೋಧರು, ಗ್ರಾ. ಪಂ. ಸದಸ್ಯರುಗಳು ಭಾಗವಹಿಸಿದ್ದರು. ಮೇಣದ ಬತ್ತಿಗಳನ್ನು ಹಚ್ಚಿ ವೀರಯೋಧರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಮಹಿಳಾ ಕಾಂಗ್ರೆಸ್
ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಡಿಕೇರಿ ಐಜಿ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕುಮಾರ್, ಮಡಿಕೇರಿ ನಗರ ಅಧ್ಯಕ್ಷ ಅಬ್ದುಲ್ ರಜಾಕ್, ಕಾರ್ಯದರ್ಶಿ ಚಂದ್ರಶೇಖರ್, ಬ್ಲಾಕ್ ಅಧ್ಯಕ್ಷ ರಮಾನಾಥ್, ಜಿ.ಪಂ. ಸದಸ್ಯೆ ಚಂದ್ರಕಲಾ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯಾಕೂಬ್, ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಜುಲೇಕಾಬಿ, ತಜಸ್ಸುಂ, ಯತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ನಗರ ಮಹಿಳಾ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಇಂದಿರಾಗಾಂಧಿ ಮಹಿಳಾ ಶಕ್ತಿ ಅಧ್ಯಕ್ಷೆ ಶಶಿ, ರಾಜೀವ್ ಗಾಂಧಿ ಸಮಿತಿಯ ತೆನ್ನಿರ ಮೈನಾ ಮತ್ತಿತರರು ಇದ್ದರು.
ಜೆಡಿಎಸ್‍ನಿಂದ ಶ್ರದ್ಧಾಂಜಲಿ
ಮಡಿಕೇರಿ ನಗರ ಜೆಡಿಎಸ್ ವತಿಯಿಂದ ಹುತಾತ್ಮ್ಟ ಯೋಧರಿಗೆ ಯುದ್ಧ ಸ್ಮಾರಕದಲ್ಲಿ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಾಜಿ ಸಚಿವ ಜೀವಿಜಯ ಸೇರಿದಂತೆ, ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಾಣಿಜ್ಯೋದ್ಯಮಿಗಳ ಸಹಕಾರ ಸಂಘದಿಂದಲೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷ ಕೆ.ಎಂ. ಗಣೇಶ್ ಸೇರಿದಂತೆ ಸಂಘದ ನಿರ್ದೇಶಕರುಗಳು, ಪದಾಧಿಕಾರಿಗಳು, ವರ್ತಕರು ಹಾಜರಿದ್ದರು.
ಮೂರ್ನಾಡುವಿನಲ್ಲಿ ಗೌರವ
ಮೂರ್ನಾಡು : ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವದರೊಂದಿಗೆ ಮಡಿಕೇರಿ ತಾಲೂಕು ವ್ಯವಸಾಯ ಪರಿವರ್ತನಾ ಸಹಕಾರ ಸಂಘ ಮೂರ್ನಾಡು (ಟಿ.ಎ.ಪಿ.ಸಿ.ಎಂ.ಎಸ್.) ವತಿಯಿಂದ ಇಂದು ಗೌರವ ನಮನ ಸಲ್ಲಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರು, ಸಿಬ್ಬಂದಿಗಳು ಮೌನಾಚರಣೆಯೊಂದಿಗೆ ನಮನ ಸಲ್ಲಿಸಿದರು.
ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಕೃತ್ಯಕ್ಕೆ ಬಲಿಯಾದ ಭಾರತೀಯ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿದರು.
ಕುಶಾಲನಗರ: ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಬಲಿಯಾದ ಯೋಧರಿಗೆ ಕುಶಾಲನಗರ ಆಟೋ ಚಾಲಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ ಸಂಘದ ಸದಸ್ಯರು, ಪ್ರಮುಖರು ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದರು.
ಪಾಕಿಸ್ತಾನಕ್ಕೆ ಧಿಕ್ಕಾರ, ಉಗ್ರಗಾಮಿಗಳ ವಿರೋಧ ಘೋಷಣೆ ಕೂಗಿದ ಕಾರ್ಯಕರ್ತರು ಮಾನವ ಸರಪಳಿ ರಚಿಸಿದರು.
ಈ ಸಂದರ್ಭ ಸಂಘದ ಸಲಹೆಗಾರ ಎಂ.ಕೆ. ದಿನೇಶ್ ಮಾತನಾಡಿ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ಅಗತ್ಯ ಎಂದರಲ್ಲದೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಸಂಘದ ಮಾಜಿ ಅಧ್ಯಕ್ಷರುಗಳಾದ ಮಹೇಶ್, ಯೋಗೇಶ್, ದಿನೇಶ್, ರಮೇಶ್, ಚಂದ್ರ ಮತ್ತಿತರರು ಇದ್ದರು.
ವಕ್ರ್ಸ್‍ಶಾಪ್ ಯೂನಿಯನ್ ವತಿಯಿಂದಲೂ ಕೂಡ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹುತಾತ್ಮ ಯೋಧ ಮಂಡ್ಯದ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ಸಂಪಾಜೆ : ದೇಶಕ್ಕಾಗಿ ವೀರ ಮರಣವನ್ನಪ್ಪಿದ ಯೋಧರಿಗೆ ಸಂಪಾಜೆಯ ವಿವಿಧ ಸಂಘ, ಸಂಸ್ಥೆ, ಇಲಾಖೆ ಸಿಬ್ಬಂದಿಗಳು ಶ್ರದ್ಧಾಂಜಲಿ ಅರ್ಪಿಸಿದರು.
ಸಂಪಾಜೆ ಗೇಟ್ ಬಳಿ ಸೇರಿದ ಪ್ರಮುಖರು ಹಾಗೂ ಸಾರ್ವಜನಿಕರು ಪಾಕಿಸ್ತಾನದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು.
ಸಂಪಾಜೆ ಗ್ರಾಮ ಮತ್ತು ಚೆಂಬು ಗ್ರಾಮದವರು, ಯೋಧಾಭಿಮಾನಿ ಬಳಗದವರು, ಸಂಪಾಜೆ ಆರಕ್ಷಕ ಠಾಣಾ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಮಾಜಿ ಸೈನಿಕರು, ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರು, ಸಂಪಾಜೆ ಮತ್ತು ಕೊಯನಾಡು ಆಟೋ ಚಾಲಕ ಮಾಲೀಕ ಸಂಘದವರು ಇದ್ದರು.
ಪೊನ್ನಂಪೇಟೆ : ಪೊನ್ನಂಪೇಟೆ ಮಾಜಿ ಸೈನಿಕರ ಸಂಘ ಸದಸ್ಯರುಗಳು ಪೊನ್ನಂಪೇಟೆ ಸಂಘದ ಕಚೇರಿಯಲ್ಲಿ ಸಭೆ ಸೇರಿ ಎರಡು ನಿಮಿಷ ಮೌನ ಆಚರಿಸುವ ಮೂಲಕ ಮೃತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭ ಅಧ್ಯಕ್ಷ ಐನಂಡ ಕೆ. ಮಂದಣ್ಣ, ಬಯವಂಡ ರಮೇಶ್, ಜನಕ, ಚಿಂಡಾಮಾಡ ಗಣೇಶ್, ಬೇಬಿ ತಮ್ಮಯ್ಯ, ಚೋಡೂಮಾಡ ಮಾದಪ್ಪ ಇತರರಿದ್ದರು.
ಶನಿವಾರಸಂತೆ : ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಶ್ಮೀರದ ಅವಂತಿಪುರದಲ್ಲಿ ನಡೆದ ಉಗ್ರರ ಧಾಳಿಯಿಂದ ಮರಣ ಹೊಂದಿದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಮೂರನೇ ಶನಿವಾರದ ಬ್ಯಾಗ್ ರಹಿತ ದಿನವನ್ನು ‘ಯೋಧ ನಮನ’ ಎಂಬ ಕಾರ್ಯಕ್ರಮವಾಗಿ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಮಂಜುನಾಥ್, ಶಿಕ್ಷಕ ಸತೀಶ್ ಮಾತನಾಡಿ ಭಯೋತ್ಪಾದಕರ ಹೀನ ಕೃತ್ಯವನ್ನು ಖಂಡಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಾಜರಿದ್ದರು.
ಶನಿವಾರಸಂತೆ : ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ರಾತ್ರಿ ವಿವಿಧ ಸಂಘಟನೆಗಳ ವತಿಯಿಂದ ಉಗ್ರರ ಧಾಳಿಗೆ ಹುತಾತ್ಮರಾದ ಸಿಆರ್‍ಪಿಎಫ್ ವೀರ ಯೋಧರಿಗೆ ದೀಪ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಚೇರಂಬಾಣೆ: ಚೇರಂಬಾಣೆಯಲ್ಲಿ ಹುತಾತ್ಮ ಯೋಧರಿಗೆ ಸಾರ್ವಜನಿಕರು ಅಂಗಡಿಗಳನ್ನು ಮುಚ್ಚಿ ಮಾನವ ಸರಪಳಿ ಮಾಡಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಸೋಮವಾರಪೇಟೆ : ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಭಯೋತ್ಪಾದಕ ಧಾಳಿಯನ್ನು ವಿವಿಧ ಸಂಘ ಸಂಸ್ಥೆಗಳು ಖಂಡಿಸಿದ್ದು, ಅಗಲಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯ ನಡೆಯುತ್ತಲೇ ಇದೆ.
ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್‍ನಲ್ಲಿ ಸದಸ್ಯರುಗಳು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಅಧ್ಯಕ್ಷ ಪಿ.ಕೆ. ರವಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸರ್ಕಾರಿ ಶಾಲಾ ಮಕ್ಕಳು, ವಿಧಾನ ಪರಿಷತ್ ಮಾಜೀ ಅಧ್ಯಕ್ಷ ಎಸ್.ಜಿ. ಮೇದಪ್ಪ, ಪ್ರಮುಖರಾದ ವಿಜಯಕುಮಾರ್, ರಘುಕುಮಾರ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಮನೆಯಲ್ಲಿ ಶ್ರದ್ಧಾಂಜಲಿ: ಸಮೀಪದ ಹಾನಗಲ್ಲು ಬಾಣೆಯ ಹೆಚ್.ಸಿ. ಸುರೇಶ್ ಅವರ ಮನೆಯಲ್ಲಿ ಮೊಂಬತ್ತಿ ಹಚ್ಚುವ ಮೂಲಕ ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುರೇಶ್ ಮತ್ತು ಗಣೇಶ್ ಕುಟುಂಬದ ಸದಸ್ಯರು ಭಾಗವಹಿಸಿ ಹುತಾತ್ಮರಿಗೆ ನಮನ ಸಲ್ಲಿಸಿದರು.
ಯೋಧರ ಸ್ಮರಣಾರ್ಥ ಹಣ್ಣಿನ ಗಿಡ
ಕುಶಾಲನಗರ :ಉಗ್ರಗಾಮಿಗಳ ದುಷ್ಕøತ್ಯಕ್ಕೆ ಬಲಿಯಾದ 44 ಯೋಧರ ಸ್ಮರಣಾರ್ಥ 44 ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಕರ್ನಾಟಕ ಕಾವಲುಪಡೆ ಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಶಾಲನಗರದ ಸಮೀಪದ ಗುಮ್ಮನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಿ ನಂತರ ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು, ಶಿಕ್ಷಕರು ಗಿಡಗಳನ್ನು ನೆಟ್ಟರು.
ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಜಯಕುಮಾರ್, ಲಲಿತಾ, ಮಂಜುಳಾ, ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಬಾರವಿ ಸಂಘದ ಬಬೀಂದ್ರಪ್ರಸಾದ್, ವಿಜೇಂದ್ರ ಪ್ರಸಾದ್, ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್.ಯಮುನಾ, ಶಿಕ್ಷಕಿಯರಾದ ಸರೋಜ, ಭಾಗ್ಯ, ಸಣ್ಣಪ್ಪ ಮತ್ತಿತರರು ಇದ್ದರು.
ಸುಂಟಿಕೊಪ್ಪ: ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ದೇಶಪ್ರೇಮಿಗಳು ಹುತಾತ್ಮ ಯೋಧರಿಗೆ ಕಂಬನಿ ಮಿಡಿದರು. ನಂತರ ಶ್ರದ್ಧಾಂಜಲಿ ಸಭೆ ನಡೆಸಿ ಹುತಾತ್ಮ ಯೋಧರಿಗೆ ದೀಪವನ್ನು ಹಚ್ಚಿ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ದೇಶಭಕ್ತಿ ಗೀತೆ ಹಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ, ಗ್ರಾ.ಪಂ.ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಸದಸ್ಯ ಕೆ.ಇ.ಕರೀಂ, ಹಿರಿಯರಾದ ವೈ.ಯಂ.ಕರುಂಬಯ್ಯ, ಸುದರ್ಶನ್ ನಾಯ್ಡು ಮಾತನಾಡಿದರು.
ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬಿಕೆ.ಪ್ರಶಾಂತ್ ಕುಮಾರ್,ಶಿವಮಣಿ, ಅಶೋಕ್, ಸದಾಶಿವ ರೈ, ರಜಾಕ್ ಟೈಲರ್, ಉಂಡೆ ರಜಾಕ್, ಅಂಬಾಜು, ಹಮೀದ್, ಬಿ.ಕೆ.ವಿಶ್ವನಾಥ ರೈ, ನಳಿನಿ, ಸಿ.ಚಂದ್ರ, ಮಧುನಾಗಪ್ಪ, ಇತರರು ಇದ್ದರು. ನಂತರ ರಾಮ ಮಂದಿರದಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿದ ಸಾರ್ವಜನಿಕರು ಪಾಕಿಸ್ತಾನ ಹಾಗೂ ಉಗ್ರರಿಗೆ ದಿಕ್ಕಾರ ಕೂಗುತ್ತಾ ಕನ್ನಡ ವೃತ್ತದಲ್ಲಿ ಅಂತ್ಯಗೊಳಿಸಿದರು.