ಮಡಿಕೇರಿ, ಫೆ. 15: ಆಧಾರ್ ತಂತ್ರಾಂಶದ ಆಪರೇಷನ್ ಕಾರ್ಯವನ್ನು ನಿರ್ದೇಶನಾಲಯದಿಂದ ನಡೆಸಲಾಗುತ್ತಿರುವದರಿಂದ ತಾ. 16ರಿಂದ (ಇಂದಿನಿಂದ) ತಾ. 24ರವರೆಗೆ ಎಲ್ಲಾ ನಾಡಕಚೇರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಧಾರ್ಗೆ ನೋಂದಣಿ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.