ಮಡಿಕೇರಿ, ಫೆ. 13: ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಂತೆ; ಪ್ರತ್ಯೇಕ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಇಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಕಳೆದ 25 ವರ್ಷಗಳಿಂದ ಕೊಡಗಿನ ಜನತೆ ಈ ಬಗ್ಗೆ ಹೋರಾಟದಲ್ಲಿ ನಿರತರಾಗಿರುವ ಅಂಶವನ್ನು ಪರಿಗಣಿಸಿ, ಸರಕಾರ ನೂತನ ತಾಲೂಕು ರಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.