ಅಮ್ಮತ್ತಿ, ಫೆ. 13: ತಾ. 23 ಮತ್ತು 24ರಂದು ದೆಹಲಿಯಲ್ಲಿ ನಡೆಯ ಲಿರುವ ಎಸ್.ಎಸ್.ಎಫ್. ರಾಷ್ಟ್ರೀಯ ಪ್ರತಿನಿಧಿ ಸಮಾವೇಶದ ಭಾಗವಾಗಿ ಜಿಲ್ಲೆಯ ಮಹಾತ್ಮರ ದರ್ಗಾಗಳ ಝಿಯಾರತ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಜಿಲ್ಲಾಮಟ್ಟದ ಉದ್ಘಾಟನೆ ರಾಜ್ಯ ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ, ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ನಾಯಕತ್ವದಲ್ಲಿ ಕೊಂಡಂಗೇರಿ ಅಬ್ದುಲ್ಲಾಹ್ ಸಖಾಫ್ ಅವರ ದರ್ಗಾ ಝಿಯಾರತ್‍ನೊಂದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ, ಕರೀಂ ಫಾಳಿಲಿ, ಮುಜೀಬ್ ಕೊಂಡಂಗೇರಿ, ಶಕೀರ್ ಮಾಸ್ಟರ್, ಮುರ್ಶಿದ್ ಅದನಿ ಮುಂತಾದ ನಾಯಕರು ಪಾಲ್ಗೊಂಡಿ ದ್ದರು. ಜಿಲ್ಲೆಯ 30ಕ್ಕಿಂತ ದರ್ಗಾಗಳಿಗೆ ತೆರಳಿ ಕಾರ್ಯಕರ್ತರು ಝಿಯಾರತ್ ನಡೆಸಿದರು.