ಕುಶಾಲನಗರ, ಫೆ. 12: ಕುಶಾಲನಗರ ರೋಟರಿ ಸಂಸ್ಥೆ ಮತ್ತು ಬೆಂಗಳೂರು ಬಸವೇಶ್ವರನಗರ ರೋಟರಿ ಸಂಯುಕ್ತಾಶ್ರಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಕುಶಾಲನಗರದಲ್ಲಿ ಏರ್ಪಡಿಸ ಲಾಗಿದೆ. ಸ್ಥಳೀಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಈ ತಿಂಗಳ 23 ರಿಂದ ಎರಡು ದಿನಗಳ ಕಾಲ ಶಿಬಿರ ನಡೆಯಲಿದೆ ಎಂದು ರೋಟರಿ ಪ್ರಕಟಣೆ ತಿಳಿಸಿದೆ.
ಶನಿವಾರ ಬೆಳಿಗ್ಗೆ 11.30 ಯಿಂದ ಸಂಜೆ 5 ಗಂಟೆ ತನಕ, ಭಾನುವಾರ ಬೆಳಿಗ್ಗೆ 9.30 ರಿಂದ 1 ಗಂಟೆ ವರೆಗೆ ಶಿಬಿರ ನಡೆಯಲಿದ್ದು ಮೊದಲು ನೋಂದಾಯಿಸಿಕೊಂಡ 60 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ರೋಟರಿ ಸದಸ್ಯೆ ಶೋಭಾ ಸತೀಶ್-9008083519, ಸುನಿತಾ ಮಹೇಶ್-9945454185 ಅಥವಾ ಆರತಿ ಎಚ್.ಶೆಟ್ಟಿ-9740028484 ಗೆ ಸಂಪರ್ಕಿಸುವಂತೆ ಕೋರಿದ್ದಾರೆ.