ವೀರಾಜಪೇಟೆ, ಫೆ. 12: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋರ್ವಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಮಡಿಕೇರಿ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಗೈಡ್ಸ್ ಭವನದ ಸುತ್ತ ಶ್ರಮದಾನ ಮಾಡಲಾಯಿತು. ಆವರಣದ ಒಳಗೆ ಮತ್ತು ಹೊರಗೆ ಇದ್ದ ಕಸಗಳನ್ನು ಹೆಕ್ಕಿ ಸ್ವಚ್ಛತೆ ಮಾಡಲಾಯಿತು. ಆವರಣದ ತಡೆಗೋಡೆಯಲ್ಲಿದ್ದ ಅನವಶ್ಯಕ ಹುಲ್ಲುಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು. ಕೊಡಗು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಪ್ರಧಾನ ಅಯುಕ್ತ ಕಂಬೀರಂಡ ಕಿಟ್ಟು ಕಾಳಪ್ಪ ಮಾರ್ಗದರ್ಶನದಲ್ಲಿ ನಡೆದ ಈ ಶ್ರಮದಾನದಲ್ಲಿ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಲೀಡರ್ ಮಂದೆಯಂಡ ಎನ್. ವನಿತ್ ಕುಮಾರ್ , ಕೊಡಗು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಕಾರ್ಯದರ್ಶಿ ಶಾಲಿನಿ, ಕಛೇರಿ ಸಿಬ್ಬಂದಿ ಗಾನ ಗಂಗಮ್ಮ ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ 20 ರೋವರ್ಸ್ ರೇಂಜರ್ಸ್ಗಳು ಭಾಗವಹಿಸಿದ್ದರು.