ಮಡಿಕೇರಿ, ಫೆ. 11: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಮಳೆಹಾನಿ ಸಂತ್ರಸ್ತರಿಗೆ ಹಂಚಿಕೆಯೊಂದಿಗೆ, ಬಾಕಿ ಉಳಿದಿರುವ ಆಹಾರ ವಸ್ತುಗಳ ಸಹಿತ ಇತರ ದಾಸ್ತಾನು ಹಾಳಾಗದಂತೆ, ಗಮನ ಹರಿಸುವ ಮೂಲಕ, ಅನಾಥ ಆಶ್ರಮಗಳು, ವೃದ್ಧಾಶ್ರಮ, ಸ್ವಸ್ಥ ಮಕ್ಕಳ ಕೇಂದ್ರಗಳಿಗೆ ಹಂಚಲು ಕ್ರಮ ಕೈಗೊಳ್ಳುವಂತೆ ನೂತನ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ನಿರ್ದೇಶಿ ಸಿದ್ದಾರೆ. ಗೋದಾಮುವಿನಲ್ಲಿ ದಾಸ್ತಾನು ಉಳಿಕೆಯೊಂದಿಗೆ ವ್ಯರ್ಥವಾಗಿರುವ ಬಗ್ಗೆ ಈ ಹಿಂದೆ ‘ಶಕ್ತಿ’ ಬೆಳಕು ಚೆಲ್ಲಿತ್ತು.ಆ ಬೆನ್ನಲ್ಲೇ ಈಚೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರ ಸಹಿತ, ಜನಪ್ರತಿನಿಧಿಗಳು ಗೋದಾಮುವಿಗೆ ಭೇಟಿ ನೀಡಿ, ದಾಸ್ತಾನು ಪರಿಶೀಲನೆಯೊಂದಿಗೆ, ವಸ್ತುಗಳು ವ್ಯರ್ಥವಾಗದಂತೆ ಜಿಲ್ಲಾಧಿಕಾರಿ ತುರ್ತು ಗಮನ ಹರಿಸಲು ಸಲಹೆ ನೀಡಿದ್ದರು. ಆ ಮೇರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ಸಂತ್ರಸ್ತರಿಗೆ ಆದ್ಯತೆ ಮೇರೆಗೆ ವಸ್ತುಗಳ ಹಂಚಿಕೆ ಮಾಡಲು ನಿರ್ದೇಶಿಸಿದ್ದಾರೆ.
ಆ ಬಳಿಕ ಇನ್ನೂ ಉಳಿದಿರುವ ಸಾಮಗ್ರಿ ಗಳನ್ನು ಆಶ್ರಮ ಶಾಲೆಗಳು, ಅಂಗನವಾಡಿ, ವಿದ್ಯಾರ್ಥಿ ನಿಲಯಗಳಿಗೆ ಪೂರೈಸುವದರೊಂದಿಗೆ, ವಿವಿಧ ಆಶ್ರಮಗಳಿಗೆ ಹಂಚಿಕೆ ಯೊಂದಿಗೆ ಸದ್ಬಳಕೆಯಾಗು ವಂತೆ ನಿಗಾವಿರಿಸಲು ಕೆಳಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಈ ಸಂಬಂಧ ಆಯಾ ತಾಲೂಕು ತಹಶೀಲ್ದಾರರಿಗೆ ನಿರ್ದೇಶನ ದೊಂದಿಗೆ, ಯಾರಾದರೂ ಸಂತ್ರಸ್ತರು ಸೌಲಭ್ಯಗಳು ದೊರಕದೆ ವಂಚಿತರಾ ಗಿದ್ದರೆ, ಪರಿಶೀಲಿಸಿ ತುರ್ತು ಕ್ರಮ ವಹಿಸಲು ಆದೇಶಿಸಿದ್ದಾರೆ. ಅನಂತರ ದಲ್ಲಿ ಉಳಿದಿರುವ ವಸ್ತುಗಳನ್ನು ಗೋದಾಮುವಿನಲ್ಲಿ ಹಾಳಾಗದಂತೆ ಆಶ್ರಮಗಳಿಗೆ ಹಂಚಿಕೆಗೆ ಕ್ರಮ ವಹಿಸಲಾ ಗುವದು ಎಂದು ಮಾಹಿತಿ ನೀಡಿದ್ದಾರೆ.
‘ಶಕ್ತಿ’ ಈ ಬಗ್ಗೆ ನೂತನ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರನ್ನು ಸಂಪರ್ಕಿಸಿದಾಗ, ಈಗಾಗಲೇ ದಾಸ್ತಾನು ಹಂಚಿಕೆಗೆ ಅಗತ್ಯ ಗಮನ ಹರಿಸಿದ್ದು, ಯಾವದೇ ವಸ್ತುಗಳು ವ್ಯರ್ಥವಾಗದಂತೆ ಆದ್ಯತೆ ಮೇರೆಗೆ ಸಂತ್ರಸ್ತರಿಗೆ ಪೂರೈಸುವಂತೆ ಮತ್ತು ಉಳಿದರೆ ಆಶ್ರಮಗಳಿಗೆ ಪೂರೈಸುವದಾಗಿ ಮಾಹಿತಿ ನೀಡಿದ್ದಾರೆ.