ಕುಶಾಲನಗರ, ಫೆ. 10: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಮೈಸೂರು ಶಿಕ್ಷಕರ ಭವನದಲ್ಲಿ ನಡೆದ 8ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಯಲ್ಲಿ ನಂಜರಾಯಪಟ್ಟಣದ ಜ್ಞಾನವಾಹಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ತೋರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕರಾಟೆ ಮಾರ್ಗದರ್ಶಕ ಹೆಚ್.ಜೆ. ಸಂಕೇತ್ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ 15 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 8 ಪ್ರಥಮ, 13 ದ್ವಿತೀಯ ಹಾಗೂ 16 ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.

ಶಾಲೆಯ ಉಪಾಧ್ಯಕ್ಷ ಎಂ.ಕೆ. ಕುಶಾಲಪ್ಪ, ಕಾರ್ಯದರ್ಶಿ ಎಸ್.ಬಿ. ನಂದಕುಮಾರ್, ಮುಖ್ಯ ಶಿಕ್ಷಕಿ ಡಿ.ಎಂ. ಸ್ವರೂಪ ಹಾಗೂ ನಂಜರಾಯಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಬಿ. ಮೂರ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭ ಕರಾಟೆ ಮಾರ್ಗದರ್ಶಕರಾದ ಸಂಕೇತ್ ಮತ್ತು ಶಾಲಾ ಶಿಕ್ಷಕ ವೃಂದದವರು ಇದ್ದರು.