ಸುಂಟಿಕೊಪ್ಪ, ಫೆ. 9: ಕಾರು ಅವಘಡಕ್ಕೀಡಾಗಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.ಮೂಲತಃ ಭಾಗಮಂಡಲದ ಕೋಪಟ್ಟಿ ನಿವಾಸಿ ಬೆಂಗಳೂರಿನ ದೊಡ್ಡ ಬೊಮ್ಮ ಸಂದ್ರದಲ್ಲಿ ನೆಲೆಸಿರುವ ಶಿವಣ್ಣ (71) ಎಂಬವರೇ ಕಾರು ಅವಘಡಕ್ಕೆ ತುತ್ತಾಗಿ ದುರ್ಮರಣಕ್ಕೀಡಾದವರಾಗಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ (ಕೆಎ.05 ಎಜಿ 7422) ನಲ್ಲಿ ಸುಳ್ಯದ ತನ್ನ ಬಾವನ ಗೃಹಪ್ರವೇಶಕ್ಕೆ ಶಿವಣ್ಣ ಮಗಳು ಭವ್ಯ ಹಾಗೂ ಚಾಲಕ ಶರೀಫ್ ಪಾಷನೊಂದಿಗೆ ಬರುತ್ತಿದ್ದಾಗ ಮುಂಜಾನೆ ಅಂದಾಜು 4.ಗಂಟೆಯ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ 7ನೇ ಹೊಸಕೋಟೆ ಬಳಿ ಕಾರು ಮನೆಯೊಂದರ ಕಾಂಪೌಂಡ್ ಗೇಟಿಗೆ ಡಿಕ್ಕಿಯಾಗಿ ಪಲ್ಟಿಯಾಗಿದ್ದು, ಇದರಿಂದ ತಲೆ ಹಾಗೂ ಎದೆ ಭಾಗಕ್ಕೆ ತೀವ್ರಗಾಯವಾಗಿ ಶಿವಣ್ಣ ಸ್ಥಳದಲ್ಲೇ ಅಸುನೀಗಿದ್ದಾರೆ.
ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಚಾಲಕ ಹಾಗೂ ಭವ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ.