ಸೋಮವಾರಪೇಟೆ, ಫೆ.9: ಇಲ್ಲಿಗೆ ಸಮೀಪದ ಹೊಸಬೀಡು ಮತ್ತು ಶಾಂತಳ್ಳಿ ಗ್ರಾಮದಲ್ಲಿ ಜನರೇಟರ್ ಹಾಗೂ ಕಾಫಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಚೀಲ ಅರೇಬಿಕ ಕಾಫಿ, ರೂ. ಒಂದು ಲಕ್ಷ ಮೌಲ್ಯದ ಜನರೇಟರ್ ಮತ್ತು ಕೃತ್ಯಕ್ಕೆ ಬಳಸಿದ ಜೀಪನ್ನು ವಶಪಡಿಸಿಕೊಂಡಿದ್ದಾರೆ. ಹೊಸÀಬೀಡು ಗ್ರಾಮದ ಸಿ.ಪಿ. ಬೆಳ್ಳಿಯಪ್ಪ ಎಂಬವರಿಗೆ ಸೇರಿದ ಜನರೇಟರ್ ಮತ್ತು ಶಾಂತಳ್ಳಿ ಗ್ರಾಮದ ರಾಮಚಂದ್ರ ಅವರಿಗೆ ಸೇರಿದ ಮೂರು ಚೀಲ ಕಾಫಿಯನ್ನು ಆರೋಪಿಗಳು ಕಳವು ಮಾಡಿದ್ದರು. ಜನರೇಟರ್‍ರನ್ನು ಕುಶಾಲನಗರದ ಕೈಗಾರಿಕಾ ಬಡಾವಣೆಯ ವಿಮಲ್ ಎಂಬವರಿಗೆ ಮಾರಾಟ ಮಾಡಿದ್ದರು. ಕಾಫಿಯನ್ನು ಇಲ್ಲಿನ ನಿಶಾಂತ್ ಕಮೋಡಿಟಿಸ್‍ನ ಸುರೇಶ್ ಎಂಬವರಿಗೆ ಮಾರಾಟ ಮಾಡಿದ್ದರು.

ಈ ಹಿಂದೆ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹೊಸಬೀಡು ಕಾಲೋನಿಯ ಶಶಿ ಎಂಬಾತನ ನೇತೃತ್ವದಲ್ಲಿ ಯಡವಾರೆಯ ಉಮೇಶ್, ಹೊಸಬೀಡಿನ ಪ್ರಮೋದ್ ಹಾಗೂ ಸುರೇಶ್, ಕಾಜೂರಿನ ಶ್ರೀಜಿತ್ ಮತ್ತು ಕಂಬಳ್ಳಿ ಗ್ರಾಮದ ರವಿ ಬಂಧಿತ ಆರೋಪಿಗಳು. ಮಾರಾಟ ಮಾಡಿದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರ್ಯಾಚರಣೆಯಲ್ಲಿ ಸಿಪಿಐ ನಂಜುಂಡೇಗೌಡ ಮಾರ್ಗದರ್ಶನದಲ್ಲಿ ಪಿಎಸ್‍ಐ ಶಿವಶಂಕರ್, ಸಿಬ್ಬಂದಿಗಳಾದ ಶಿವಕುಮಾರ್, ಮಧು, ಜಗದೀಶ್, ಪ್ರವೀಣ್, ಸಂದೇಶ್, ಮಹೇಂದ್ರ ಮತ್ತು ಕುಮಾರ್ ಪಾಲ್ಗೊಂಡಿದ್ದರು.