ವೀರಾಜಪೇಟೆ, ಫೆ. 8: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯುವ ರೆಡ್ ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ಹಾಗೂ ರೋವರ್ಸ್ ರೇಂಜರ್ಸ್ ಘಟಕದ ಸಹಯೋಗದಲ್ಲಿ ತಾ. 11 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟ ಯುವಜನರು ಸ್ವಯಂ ಪ್ರೇರಿತ ರಕ್ತದಾನ ಮಾಡಬಹುದು. ರಕ್ತದಾನ ಮಾಡುವವರು ಬೆಳಗಿನ ಉಪಹಾರ ಸೇವಿಸಿ ಬರಬೇಕಾಗುತ್ತದೆ. ಬೆಳಿಗ್ಗೆ 11 ರಿಂದ 1 ಗಂಟೆಯೊಳಗೆ ಸ್ವಯಂಪೇರಿತ ರಕ್ತದಾನ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9880504208 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.