ಶನಿವಾರಸಂತೆ, ಫೆ. 8: ಶನಿವಾರಸಂತೆಯ ರೋಟರಿ ಕ್ಲಬ್‍ನ ಕುಟುಂಬದವರಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ವಿದ್ಯಾಸಂಸ್ಥೆಯ ಶಾಲಾ ಮೈದಾನದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಆರ್. ಹರೀಶ್ ಉದ್ಘಾಟಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ ಮಾತನಾಡಿ, ರೋಟರಿ ಕ್ಲಬ್ ಸಂಸ್ಥೆಯ ಪದಾಧಿಕಾರಿಗಳ ಕುಟುಂಬದ ಮನ ಸಂತೋಷಕ್ಕಾಗಿ ಫುಟ್ಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಟೆನ್ನಿಕಾಯ್ಟ್, ಖೋ-ಖೋ ಇತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳಾದ ಹೆಚ್.ಪಿ. ದಿವಾಕರ್, ಎ.ಡಿ. ಮೋಹನ್‍ಸಾಗರ್, ಸುಬ್ಬು, ವಸಂತ್, ಅರವಿಂದ್, ಯಶ್ವಂತ್, ಸುರೇಶ್, ಮಧು, ಮೋಹನ್, ಚಂದನ್, ಸ್ವಾಗತ್ ಹಾಗೂ ಕುಟುಂಬದ ಸದಸ್ಯರು, ಮಕ್ಕಳು ಉಪಸ್ಥಿತರಿದ್ದರು.